Skip to main content


ಸಂಪುಟ ರಚನೆಗೆ ಮುನ್ನವೇ ಎಸ್.ಆರ್ ಪಾಟೀಲ್ ಪದತ್ಯಾಗ!

ಸಚಿವ ಸಂಪುಟ ವಿಸ್ತರಣೆ ಮುನ್ನವೇ ಕಾಂಗ್ರೆಸ್ ನ ಮೊದಲ ವಿಕೆಟ್ ಪತನಗೊಂಡಿದ್ದು, ಕಾಂಗ್ರೆಸ್ಸಿನ ಹಿರಿಯ ನಾಯಕ ಪದತ್ಯಾಗ ಮಾಡಿದ್ದಾರೆ. .ಆರ್. ಪಾಟೀಲ್ ಕಾಂಗ್ರೆಸ್ ನಾಯಕರ ವರ್ತನೆಗೆ ಬೇಸತ್ತು ರಾಜೀನಾಮೆ ನೀಡಿದ್ದು, ರಾಹುಲ್ ಗಾಂಧಿಗೆ ರಾಜೀನಾಮೆ ಪತ್ರ ರವಾನಿಸಿದ್ದಾರೆ. ಇವರು ಕಾಂಗ್ರೆಸ್ ಮೇಲ್ಮನೆ ಸದಸ್ಯರಾಗಿದ್ದು, ಈಗ ರಾಜೀನಾಮೆ ಕೊಟ್ಟು ಹೊಸ ಬಾಂಬ್ ಸಿಡಿಸಿದ್ದಾರೆ. ಕಾಂಗ್ರೆಸ್ ನಲ್ಲಿ ಹಿರಿಯ ನಾಯಕರಿಗೆ ಬೆಲೆ ಇಲ್ಲದಂತಾಗಿದೆ. ನಿಷ್ಠಾವಂತ ಮುಖಂಡರಿಗೆ ಕವಡೆ ಕಿಮ್ಮತ್ತಿಲ್ಲ. ಪಕ್ಷದ ನಾಯಕರಿಗೆ ಸಿದ್ದರಾಮಯ್ಯ, ಪರಮೇಶ್ವರ್ ಮಣೆ ಹಾಕುತ್ತಿಲ್ಲ. ಕಾಂಗ್ರೆಸ್ ನೇತಾರರಿಗಿಂತ ಜೆಡಿಎಸ್ ನಾಯಕರೇ ಹೆಚ್ಚು ಆಪ್ಯಾಯಮಾನ ಮಾಡಿದ್ದಾರೆ ಎಂದು ಕೇಂದ್ರ ಹಾಗೂ ರಾಜ್ಯ ನಾಯಕರ ವಿರುದ್ಧ ಎಸ್.ಆರ್. ಪಾಟೀಲ್  ಆರೋಪ ಮಾಡಿದ್ದಾರೆ.   

short by Pawan / more at Public Tv

Comments