Skip to main content


ಚಾಲೆಂಜಿಂಗ್ ಸ್ಟಾರ್ ಒಡೆಯರ್ ಆಗೋದು ಯಾವಾಗ?

ಒಂದು ಸಿನಿಮಾವಿನ್ನೂ ಚಿತ್ರೀಕರಣದ ಹಂತದಲ್ಲಿರುವಾಗಲೇ ಮುಂದಿನ ಸಿನಿಮಾದ ಬಗ್ಗೆ ಕುತೂಹಲ ಹುಟ್ಟು ಹಾಕೋದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಸ್ಪೆಷಾಲಿಟಿ. ಇದೀಗ ಅವರ ಯಜಮಾನ ಚಿತ್ರ ಚಿತ್ರೀಕರಣದ ಹಂತದಲ್ಲಿರುವಾಗಲೇ ದರ್ಶನ್ ಐವತ್ತೆರಡನೇ ಚಿತ್ರ ಒಡೆಯರ್ ಯಾವತ್ತು ಶುರುವಾಗುತ್ತದೆ ಎಂಬ ಪ್ರಶ್ನೆ ಅಭಿಮಾನಿಗಳನ್ನು ಮಾತ್ರವಲ್ಲದೆ ಸಿನಿ ಪ್ರೇಕ್ಷಕರನ್ನೆಲ್ಲ ಕಾಡುತ್ತಿದೆ! ಆದರೆ, ಒಡೆಯರ್ ಚಿತ್ರ ತಂಡ ಮಾತ್ರ ಈ ಬಗ್ಗೆ ಸಣ್ಣದೊಂದು ಗುಟ್ಟನ್ನೂ ಬಿಟ್ಟು ಕೊಡದಂತೆ ಸದಾ ಎಚ್ಚರ ವಹಿಸುತ್ತಾ ಬಂದಿದೆ. ಅದಕ್ಕೆ ಕಾರಣವಾಗಿರೋದು ದರ್ಶನ್ ಅವರು ಪರಿ ಪಾಲಿಸಿಕೊಂಡು ಬಂದಿರುವ ಅಘೋಶಿತ ನಿಯಮ!

ಬರುವ ಆಗಸ್ಟ್ ಹದಿನಾರನೇ ತಾರೀಕಿನಂದು ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ದರ್ಶನ್ ಅವರ ಐವತ್ತೆರಡನೇ ಚಿತ್ರವಾದ ಒಡೆಯರ್ ಮುಹೂರ್ತ ಕಾಣಲಿದೆ. ಅಂದಹಾಗೆ ಈ ಚಿತ್ರವನ್ನು ಸಂದೇಶ್ ನಾಗರಾಜ್ ಅವರು ನಿರ್ಮಾಣ ಮಾಡಲಿದ್ದಾರೆ. ಆಗಸ್ಟ್ ಹದಿನಾರು ಅವರ ಹುಟ್ಟಿದ ದಿನ. ಆ ದಿನವೇ ಒಡೆಯರ್ ಚಿತ್ರಕ್ಕೆ ಮುಹೂರ್ತ ಸಮಾರಂಭ ಮಾಡಲು ಚಿತ್ರ ತಂಡ ತೀರ್ಮಾನಿಸಿದೆ. ಯಶಸ್ವಿ ಜೋಡಿ ಎಂದೇ ಪರಿಗಣಿಸಲ್ಪಟ್ಟಿರುವ ಸಂದೇಶ್ ನಾಗರಾಜ್ ಮತ್ತು ದರ್ಶನ್ ಜೋಡಿಯ ಮತ್ತೊಂದು ಮೋಡಿಗೆ ಈ ಮೂಲಕ ಚಾಲನೆ ಸಿಗಲಿದೆ.   

short by Pawan / more at Cinibuzz

Comments