Skip to main content


ಗುಬ್ಬಿ ಮೇಲೆ ಬ್ರಹ್ಮಾಸ್ತ್ರ.. ಒಂದು ಮೊಟ್ಟೆ ಕಥೆಯ ರಾಜ್ ಶೆಟ್ಟಿ ಈಗ ಫುಲ್‌ ಬ್ಯುಸಿ

ಪುನೀತ್ ರಾಜಕುಮಾರ್ ನಿರ್ಮಾಣದ `ಮಾಯಾ ಬಜಾರ್ 2016' ಎಂಬ ಚಿತ್ರದಲ್ಲಿ ರಾಜ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದು, ಅದರ ಜೊತೆಗೆ `ಅಮ್ಮಚ್ಚಿಯ ನೆನಪು' ಎಂಬ ಚಿತ್ರದಲ್ಲಿ ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅದರ ಜೊತೆಗೆ ಹೇಮಂತ್ ಕುಮಾರ್ ಎಂಬ ಹೊಸ ನಿರ್ದೇಶಕರ ಚಿತ್ರದಲ್ಲೂ ರಾಜ್ ನಟಿಸಿದ್ದಾರೆ. ಅದರ ಮಧ್ಯೆ ಈಗ ಅವರು ಇನ್ನೂ ಒಂದು ಚಿತ್ರವನ್ನು ಒಪ್ಪಿಕೊಂಡಿದ್ದಾರೆ.

ರಾಜ್‌ ಶೆಟ್ಟಿ `ಗುಬ್ಬಿ ಮೇಲೆ ಬ್ರಹ್ಮಾಸ್ತ್ರ' ಎಂಬ ಚಿತ್ರವನ್ನು ಒಪ್ಪಿಕೊಂಡಿದ್ದು, ಅದು ಇಂದಿನಿಂದ ಪ್ರಾರಂಭವಾಗಿದೆ. ಬೆಂಗಳೂರಿನ ರಾಜರಾಜೇಶ್ವರಿ ನಗರದ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಚಿತ್ರಕ್ಕೆ ಇಂದು ಚಾಲನೆ ಸಿಕ್ಕಿದೆ. ಹೆಸರು ಕೇಳಿದರೆ, ಚಿತ್ರದಲ್ಲಿ ರಾಜ್ ಗುಬ್ಬಿಯಾಗಿ ನಟಿಸುತ್ತಿರುವುದು ಪಕ್ಕಾ. ಅವರ ಮೇಲೆ ಬ್ರಹ್ಮಾಸ್ತ್ರ ಪ್ರಯೋಗಿಸುತ್ತಿರುವವರು ಯಾರು ಮತ್ತು ಯಾಕೆ ಎಂಬ ಪ್ರಶ್ನೆಗಳಿಗೆ ಇನ್ನೂ ಉತ್ತರ ಸಿಗಬೇಕಿದೆ. ಇಂದಿನಿಂದ ಚಿತ್ರೀಕರಣ ಪ್ರಾರಂಭವಾಗಿದ್ದು, ಸದ್ಯದಲ್ಲೇ ಈ ಪ್ರಶ್ನೆಗಳಿಗೆ ಉತ್ತರ ಸಿಗುವ ಸಾಧ್ಯತೆ ಇದೆ.    

short by Pawan / more at Eenadu India

Comments