Skip to main content


ರಾಜ್ ಕುಟುಂಬದ ಕುಡಿಗೇ ಇಂಥಾ ಕಷ್ಟವಾದರೆ..

ರಘು ಶಾಸ್ತ್ರಿ ನಿರ್ದೇಶನದ ರನ್ ಆಂಟನಿ ಚಿತ್ರದ ಬಳಿಕ ಒಂದು ಸುದೀರ್ಘವಾದ ವಿರಾಮ ತೆಗೆದುಕೊಂಡಿದ್ದ ವಿನಯ್ ರಾಜ್‌ಕುಮಾರ್ ಇದೀಗ ಅನಂತು ವರ್ಸಸ್ ನುಸ್ರತ್ ಎಂಬ ಚಿತ್ರದ ಮೂಲಕ ಮತ್ತೆ ಮರಳಿದ್ದಾರೆ. ೨೦೧೭ರ ಸೆಪ್ಟೆಂಬರ್‌ನಲ್ಲಿ ಆರಂಭವಾಗಿ ಬಹಳಷ್ಟು ಸಮಯವನ್ನೇ ತೆಗೆದುಕೊಂಡ ಈ ಚಿತ್ರವೀಗ ಅಂತಿಮ ಹಂತ ತಲುಪಿದೆ. ಹೀಗೆ ಈ ಚಿತ್ರ ತಡವಾಗಲು ಏನು ಕಾರಣ ಅಂತ ನೋಡ ಹೋದರೆ ಅನಂತು ವರ್ಸಸ್ ನುಸತ್ ಚಿತ್ರಕ್ಕೆ ಅದರ ನಾಯಕಿ ಲತಾ ಹೆಗಡೆಯೇ ನುಸಿಪೀಡೆಯಂತೆ ಕಾಡಿ ಒಂದಿಡೀ ಚಿತ್ರ ತಂಡವನ್ನೇ ಕಂಗಾಲು ಮಾಡಿದ ಪ್ರಸಂಗವೊಂದು ಹೊರ ಬೀಳುತ್ತದೆ!

ಸುಧೀರ್ ಶಾನುಭೋಗ್ ನಿರ್ದೇಶನದ ಈ ಚಿತ್ರದಲ್ಲಿ ವಿನಯ್ ರಾಜ್‌ಕುಮಾರ್ ಲಾಯರ್ ಆಗಿ ನಟಿಸಿದ್ದಾರೆ. ಆದರೆ ಯಾವತ್ತೋ ಮುಗಿಯಬೇಕಿದ್ದ ಈ ಚಿತ್ರ ಕುಂಟುತ್ತಾ ಸಾಗಿದ್ದಕ್ಕೆ ಮೂಲ ಕಾರಣ ನಾಯಕಿ ಲತಾ ಹೆಗಡೆಯಂತೆ. ಆರಂಭದಲ್ಲಿ ಎಲ್ಲವೂ ಸರಿಯಾಗಿತ್ತು. ಆದರೆ ಮೊದಲು ಹೇಳಿದ್ದ ಶೆಡ್ಯೂಲ್‌ನಂತೆ ಚಿತ್ರೀಕರಣ ನಡೆಯುವಲ್ಲಿ ಚಿತ್ರ ತಂಡದ ಕಡೆಯಿಂದಲೇ ಕೊಂಚ ತಡವಾಗಿತ್ತು. ಸಿನಿಮಾ ಅಂದಮೇಲೆ ದಿನಗಳಲ್ಲಿ ಒಂಚೂರು ಆಚೀಚೆ ಆಗೋದು ಮಾಮೂಲು. ಅದಾದ ನಂತರ ಪಕ್ಕಾ ನುಸಿಪೀಡೆಯಂತೆ ಕಾಡಲಾರಂಭಿಸಿದ್ದೇ ಒಳ್ಳೆ ಸಮಯದಲ್ಲಿ ತಾನು ವಾಸವಿರೋ ನ್ಯೂಜಿಲ್ಯಾಂಡಿಗೆ ತೆರಳಿ ಕೂತು ಬಿಟ್ಟಿದ್ದಳು.

ಬೇರೆ ದಾರಿ ಕಾಣದ ನಿರ್ಮಾಪಕರು ಆಕೆ ಕೇಳಿದಂತೆ ಎಕ್ಸ್‌ಟ್ರಾ ಕಾಸನ್ನೂ ಕೊಡಲು ಒಪ್ಪಿಕೊಂಡಾಗ ಲತಾ ಹೆಗಡೆಯ ಕಡೆಯಿಂದ ಮತ್ತಷ್ಟು ವರಾತಗಳು ನ್ಯೂಜಿಲ್ಯಾಂಡಿಂದಲೇ ತೇಲಿ ಬಂದಿದ್ದವು. ಅವನ್ಯಾರೋ ಆಕೆಯ ಭಾವೀ ಪತಿರಾಯನಾದ ವೈದ್ಯನನ್ನೂ ತನ್ನ ಜೊತೆ ಕರೆದುಕೊಂಡು ಬಂದು ಆತನ ಖರ್ಚು ವೆಚ್ಚಗಳನ್ನೂ ಭರಿಸಬೇಕೆಂಬ ಬೇಡಿಕೆ ಇಟ್ಟಿದ್ದಳು. ಇನ್ನೇನು ಬಹು ಭಾಗದ ಚಿತ್ರೀಕರಣ ಮುಗಿದಿದ್ದರಿಂದ ನಾಯಕಿಯನ್ನು ಬದಲಾಯಿಸೋ ಆಪ್ಷನ್ನೂ ಇಲ್ಲದೆ ಕಂಗಾಲಾಗಿದ್ದ ಚಿತ್ರತಂಡ ಅವುಡುಗಚ್ಚಿ ಎಲ್ಲವನ್ನು ಸಹಿಸಿಕೊಂಡು ಆಕೆಯ ಭಾಗದ ಚಿತ್ರೀಕರಣವನ್ನು ಹೇಗೋ ಮುಗಿಸಿಕೊಂಡು ಲತಾಳನ್ನು ನ್ಯೂಜಿಲ್ಯಾಂಡಿಗೆ ಸಾಗಹಾಕಿ ಕೊಂಚ ನಿರಾಳವಾಗಿದೆಯಂತೆ!    

short by Pawan / more at Cinibuzz


Comments