Skip to main content


ಪುನೀತ್ ಚಿತ್ರಕ್ಕೆ ನಾಯಕಿಯಾಗ್ತಾರಾ ಅನುಪಮಾ ಪರಮೇಶ್ವರನ್..???

ಪುನೀತ್ ರಾಜಕುಮಾರ್ ಅವರ ಬಹುನಿರೀಕ್ಷಿತ ಚಿತ್ರವಾದ 'ನಟ ಸಾರ್ವಭೌಮ' ಚಿತ್ರದ ಚಿತ್ರೀಕರಣ ಬಹುತೇಕ ಮುಗಿದಿದೆ. ಪವನ್ ಒಡೆಯರ್ ನಿರ್ದೇಶನದ ರಾಕ್ ಲೈನ್ ವೆಂಕಟೇಶ್ ಪ್ರೊಡಕ್ಷನ್ ನಡಿ ನಿರ್ಮಾಣವಾಗುತ್ತಿರುವ ಈ ಚಿತ್ರದ ಶೂಟಿಂಗ್ ಆರಂಭದಲ್ಲಿ ಇಬ್ಬರು ನಾಯಕಿಯರು ಎಂದು ಚಿತ್ರತಂಡ ಘೋಷಿಸಿತ್ತು.ನಟಿ ಪ್ರಿಯಾಂಕಾ ಅವರ ಸೆಲೆಕ್ಟ್ ಸಹ ಆಗಿದ್ದರು. ತದನಂತರ ಪ್ರಿಯಾಂಕಾ ಅವರು ಚಿತ್ರದಿಂದ ಹೊರ ಬಂದ ನಂತರ ರಚಿತಾ ರಾಮ್ ಆಯ್ಕೆಯಾಗಿದ್ದರು. ಇದೀಗ ಅವರ ಭಾಗದ ಚಿತ್ರೀಕರಣ ಮುಗಿದಿದ್ದು, ಮತ್ತೊಬ್ಬ ನಾಯಕಿ ಪಾತ್ರಕ್ಕಾಗಿ ಚಿತ್ರತಂಡ ಅನುಪಮಾ ಪರಮೇಶ್ವರನ್ ಅವರನ್ನು ಸಂಪರ್ಕಿಸಲಾಗಿದೆಯಂತೆ.

ಚಿತ್ರತಂಡದಿಂದ ಯಾವುದೇ ಘೋಷಣೆ ಬಂದಿಲ್ಲ. ಹೀಗಾಗಿ ಚಿತ್ರತಂಡದಿಂದ ಅಧಿಕೃತ ಘೋಷಣೆಯಷ್ಟೇ ಬಾಕಿಯಿದೆಯಂತೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಅನುಪಮಾ ಪರಮೇಶ್ವರನ್ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲಿದ್ದಾರೆ. ಇವರು ಈಗಾಗಲೇ ಪ್ರೇಮಂ ಎಂಬ ಹಿಟ್ ಚಿತ್ರದ ಮೂಲಕ ಮಾಲಿವುಡ್ ನಲ್ಲಿ ಖ್ಯಾತಿ ಗಳಿಸಿದ್ದು, ಟಾಲಿವುಡ್ ನಲ್ಲಿ ಕೂಡ ಹೆಸರು ಗಳಿಸಿದ್ದಾರೆ.   

short by Pawan / more at Balkani News


Comments