Skip to main content


ಹಾಡಿದ್ದನ್ನೇ ಹಾಡಿ ಸಾಕಾಗಿದೆ ಎಂದ ಚಂದನ್‌ ಶೆಟ್ಟಿ

ಮೂರು ಪೆಗ್‌, ಚಾಕೋಲೆಟ್‌ ಗರ್ಲ್‌, ಟಕೀಲಾದಂತಹ ತನ್ನದೇ ಶೈಲಿಯ ರಾರ‍ಯಪ್‌ ಹಾಡುಗಳ ಮೂಲಕ ಎಲ್ಲರ ಮನಗೆದ್ದಿರುವ ಚಂದನ್‌ ಶೆಟ್ಟಿ, ಇದೀಗ ಮತ್ತೊಂದು ಹೊಸ ಹಾಡಿಗೆ ರೆಡಿಯಾಗುತ್ತಿದ್ದಾರೆ.

ಕರ್ನಾಟಕದ ಸಂಸ್ಕೃತಿ ಹಾಗೂ ಕಲೆಯನ್ನು ಈ ಹಾಡು ಒಳಗೊಂಡಿದ್ದು, ವಿವಿಧ ಕ್ಷೇತ್ರಗಳ 500 ಕಲಾವಿದರು ಈ ಹಾಡಿನಲ್ಲಿ ಇದ್ದಾರೆ. ಡೊಳ್ಳು ಕುಣಿತ, ಕಂಸಾಳೆ, ಕರಗ, ಸೇರಿ ನಮ್ಮ ನೆಲದ ವಿವಿಧ ಕಲೆಗಳನ್ನು ಪ್ರತಿಬಿಂಬಿಸಲಾಗಿದೆ. ನಾಡಿದಾದ್ಯಂತ ಎಲ್ಲಾ ಸ್ಥಳಗಳಲ್ಲೂ ಚಿತ್ರೀಕರಣ ಮಾಡುವ ಯೋಜನೆ ಇದೆ ಎಂದು ತಿಳಿಸಿದ್ದಾರೆ ಚಂದನ್‌ ಶೆಟ್ಟಿ.
 
'ಹಾಡಿದ್ದನ್ನೇ ಹಾಡಿ ನನಗೂ ಸಾಕಾಗಿದೆ' ಎಂಬದು ಹಾಡಿನ ಮೊದಲ ಸಾಲಾಗಿದ್ದು, ಈಗಾಗಲೇ ಹಾಡನ್ನು ಸಂಪೂರ್ಣ ರಚಿಸಿಕೊಂಡಿದ್ದೇನೆ. 3 ಪೆಗ್‌ ನಂತರ ಇಡಿಯಂ ಹಾಡಿನ ಶೈಲಿಗೆ ಡಿಮಾಂಡ್‌ ಕಡಿಮೆಯಾಗಿದ್ದು, ಅಲ್ಲೀಗ ಸಂಸ್ಕೃತಿ ಹಾಗೂ ಕಲೆಯನ್ನು ಒಳಗೊಂಡ ರಾರ‍ಯಪ್‌ ಹಾಡುಗಳು ಟ್ರೆಂಡಾಗಿವೆ. ಆ ಸ್ಟೈಲ್‌ ಇನ್ನೂ ಭಾರತಕ್ಕೆ ಬಂದಿಲ್ಲ. ಅಂತದ್ದನ್ನೇ ನಮ್ಮಲ್ಲೂ ತರಬೇಕೆಂದು ಈ ಹಾಡನ್ನು ಪ್ಲ್ಯಾನ್‌ ಮಾಡಿದ್ದೇನೆ. ಅದನ್ನು ಜನ ಹೇಗೆ ಸ್ವೀಕರಿಸುತ್ತಾರೋ ಕಾದು ನೋಡಬೇಕಾಗಿದೆ ಎಂದು ಚಂದನ್‌ ಶೆಟ್ಟಿ ಹೇಳಿದ್ದಾರೆ.    

short by Pawan / more at Vijayakarnataka

Comments