Skip to main content


ಈ ವಾರದಲ್ಲಿ ಉನ್ನತ ಶಿಕ್ಷಣ ಖಾತೆ ಬದಲು : ಜಿಟಿಡಿ

ಎಚ್.ಡಿ.ಕುಮಾರಸ್ವಾಮಿ ಅವರು ಸಂಪುಟ ರಚನೆ ಮಾಡಿದ ಬಳಿಕ ಉನ್ನತ ಶಿಕ್ಷಣ ಖಾತೆ ಬಗ್ಗೆ ಭಾರೀ ಚರ್ಚೆ ನಡೆದಿತ್ತು. ಎರಡು ಮೂರು ದಿನದಲ್ಲಿ ಸಚಿವರ ಖಾತೆ ಬದಲಾವಣೆಯಾಗುವ ಸಾಧ್ಯತೆ ಇದೆ. ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ ಅವರು ಮಂಗಳವಾರ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದರು. ಭೇಟಿಯ ಬಳಿಕ ಮಾತನಾಡಿದ ಅವರು, 'ಜನರಿಗೆ ಹತ್ತಿರವಿರುವ ಖಾತೆ ನೀಡುವಂತೆ ಕೇಳಿದ್ದೇನೆ. ಇದಕ್ಕೆ ಕುಮಾರಸ್ವಾಮಿ ಅವರು ಒಪ್ಪಿಗೆ ನೀಡಿದ್ದಾರೆ' ಎಂದರು. 'ಇನ್ನು ಎರಡು ಅಥವ ಮೂರು ದಿನದಲ್ಲಿ ಖಾತೆ ಬದಲಾವಣೆ ಆಗಲಿದೆ. ಕುಮಾರಸ್ವಾಮಿ ಅವರು ಸಹ ಖಾತೆ ಬದಲಾವಣೆಗೆ ಒಪ್ಪಿಗೆ ನೀಡಿದ್ದಾರೆ' ಎಂದು ಹೇಳಿದರು.      

short by Pawan / more at Oneindia

Comments