Skip to main content


ರಿವೀಲ್ ಆಯ್ತು ಕಿನಾರೆ ಸಿನಿಮಾದ ಕೋಳಿ ಸಾಂಗು – ಚಂದನ್ ಹಾಡಿಗಿದೆ ಹುಚ್ಚು ಹಿಡಿಸೋ ಗುಂಗು !

ಮ್ಯೂಸಿಕ್ ಬಜಾರ್ ಗೆ  ಹೊಸದೊಂದು ಹಾಡು ಎಂಟ್ರಿ ಕೊಟ್ಟಿದೆ. ನಯಾ ಹಾಡಿನ ಬಗ್ಗೆ ಆ್ಯಕ್ಷನ್ ಪ್ರಿನ್ಸ್ ಧೃವ ಸರ್ಜಾ ಮಾತನಾಡಿದ್ದಾರೆ. ಕಿನಾರೆ ನಿಮಗೆಲ್ಲಾ ತಿಳಿದಿರುವ ಹಾಗೇ ರೆಡ್ ಆ್ಯಪಲ್ ಮತ್ತು ಅದಿತಿ ಫಿಲ್‍ಂ ಬ್ಯಾನರ್ ನಲ್ಲಿ ರೆಡಿಯಾಗುತ್ತಿರುವ ಸಿನಿಮಾವಾಗಿದೆ. ಈಗಾಗಲೇ ಸಿನಿಮಾದ ಟೀಸರ್ ಮತ್ತು ಮೇಕಿಂಗ್ ಬಹಳಷ್ಟು ಭರವಸೆ ಮೂಡಿಸಿದೆ. ಚಿತ್ರತಂಡ ಈಗ ಮೊದಲ ಹಾಡನ್ನ ರಿವೀಲ್ ಮಾಡಿದ್ದು ಇನ್ನಷ್ಟು ನಿರೀಕ್ಷೆ ಹೆಚ್ಚಿಸಿದೆ. ಚಂದನ್ ಶೆಟ್ಟಿ ಕಂಠಸಿರಿಯಲ್ಲಿ ಮೂಡಿಬಂದಿರುವ ಕೋಳಿ ಸಾಂಗ್ ಕಿನಾರೆಯ ಸತ್ವ ಸಾರುತ್ತಿದೆ. ಈ ತಿಂಗಳು ವಾರಕ್ಕೊಂದು ಹೊಸ ಹಾಡು ಬಿಡುಗಡೆ ಮಾಡಲು ಪ್ಲಾನ್ ಮಾಡಿಕೊಂಡಿದೆ. ಚಿತ್ರದಲ್ಲಿ ಒಟ್ಟು 4 ಹಾಡುಗಳಿದ್ದು, ಜಯಂತ್ ಕಾಯ್ಕಿಣಿ, ಯೋಗರಾಜ್ ಭಟ್ಟ್, ವಿ. ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದಾರೆ.     

short by Pawan / more at Public Tv

Comments