Skip to main content


ಮೋದಿ ಟೀಕಿಸುವ ಭರದಲ್ಲಿ ಕೋಕಾ-ಕೋಲಾ, ಮ್ಯಾಕ್ ಡೊನಾಲ್ಡ್ ಇತಿಹಾಸ ಬದಲಿಸಿದ ರಾಹುಲ್

ರಾಷ್ಟ್ರ ರಾಜಧಾನಿಯಲ್ಲಿ ನಡೆದ ಒಬಿಸಿ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡುತ್ತಿದ್ದ ರಾಹುಲ್ , ಮೋದಿ ಕೇವಲ ಉದ್ಯಮಪತಿಗಳ ಪರವಾಗಿದ್ದಾರೆ. ಅಮೆರಿಕದಂತಹ ದೇಶಗಳಲ್ಲಿ ಸಾಮಾನ್ಯ ವ್ಯಕ್ತಿಗಳು ಸಹ ದೊಡ್ಡ ಕಂಪೆನಿ ಮಾಲೀಕರಾಗಿ ಬೆಳೆದು ನಿಂತ ಉದಾಹರಣೆ ಇದೆ. ಶರಬತ್ತು ಮಾರುತ್ತಿದ್ದ ವ್ಯಕ್ತಿ ಕೋಕಾ-ಕೋಲಾ ಕಂಪನಿ ಸ್ಥಾಪಿಸಿದರೆ, ಡಾಬಾ ನಡೆಸುತ್ತಿದ್ದ ಸಾಮಾನ್ಯ ವ್ಯಕ್ತಿ ಮ್ಯಾಕ್ ಡೋನಾಲ್ಡ್‌ನಂತಹ ಬೃಹತ್ ಕಂಪೆನಿಯನ್ನು ಹುಟ್ಟುಹಾಕಿದ. ಆದರೆ ಭಾರತದಲ್ಲಿ ಸಾಮಾನ್ಯ ಮೆಕ್ಯಾನಿಕ್ ಒಬ್ಬ ಆಟೋಮೊಬೈಲ್ ಕಂಪನಿ ಮಾಲೀಕರಾಗಿರುವುದನ್ನು ಕಂಡಿದ್ದೀರಾ? ಎಂದು ಪ್ರಶ್ನಿಸಿದ್ದಾರೆ. ಆದರೆ ಈ ಎರಡು ಕಂಪನಿಗಳ ಮೂಲಕ್ಕೂ ರಾಹುಲ್ ಹೇಳಿಕೆಗೂ ಸಂಬಂಧವಿಲ್ಲದಿರುವುದು ಗೂಗಲ್ ಮಾಡಿದಾಗ ಸ್ಪಷ್ಟವಾಗುತ್ತದೆ.     

short by Pawan / more at Vijayakarnataka

Comments