Skip to main content


ಶಾಲೆಯ ಸಂದರ್ಶನದಲ್ಲಿ ಇಂತಹ ಪ್ರಶ್ನೆ... ಅದನ್ನ ಕೇಳಿ ಅಘಾತಕ್ಕೊಳಗಾದ ಮಹಿಳೆ!

30 ವರ್ಷದ ಸುಚಿತ್ರಾ ಎಂಬುವವರು ಭೂಗೋಳ ಶಾಸ್ತ್ರ ಹಾಗೂ ಇಂಗ್ಲಿಷ್‌‌ನಲ್ಲಿ ಡಬಲ್‌ ಎಂಎ ಮುಗಿಸಿದ್ದು, ಅದರ ನೆರವಿನಿಂದ ತನಗೆ ಕೆಲಸ ಸಿಗಬಹುದು ಎಂದು ನಂಬಿ ಸಂದರ್ಶನಕ್ಕೆ ಹಾಜರಾಗಿದ್ದರು. ಆದರೆ ಅಲ್ಲಿ ಸಂದರ್ಶಕರು ಆಕೆಗೆ ನಿಮ್ಮ ಸ್ತನಗಳು ನಿಜವೇ? ನೀವು ಮಗುವಿಗೆ ಜನ್ಮ ನೀಡುತ್ತೀರಾ ಎಂಬ ಪ್ರಶ್ನೆ ಕೇಳಿದ್ದು, ಇದರಿಂದ ಆಕೆ ಅಘಾತಕ್ಕೊಳಗಾಗಿದ್ದಾಳೆ. ಇದಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಸುಚಿತ್ರಾ ಬರೆದುಕೊಂಡಿದ್ದಾರೆ. 

ಸಂದರ್ಶಕರಿಗೆ ನನ್ನ ಡಬಲ್‌ ಡಿಗ್ರಿ ಅಥವಾ ಶಿಕ್ಷಣದ ಕುರಿತು ಮಾಹಿತಿ ಬೇಕಾಗಿರಲಿಲ್ಲ. ಅವರು ಇಂತಹ ಕೀಳು ಮಟ್ಟದ ಪ್ರಶ್ನೆ ಕೇಳುತ್ತಾರೆ ಎಂದು ನಾನು ಉಹೆ ಮಾಡಿರಲಿಲ್ಲ. ಜತೆಗೆ ಸಂದರ್ಶನದಲ್ಲಿ ಅವರು ನನ್ನನ್ನು ತೃತೀಯ ಲಿಂಗಿಯಂತೆ ನೋಡಿಕೊಂಡರು. ಇಷ್ಟೊಂದು ಕೀಳು ಮಟ್ಟದಲ್ಲಿ ಅವರು ಕಾಣುತ್ತಾರೆ ಎಂಬುದು ನಿಜಕ್ಕೂ ದುರದೃಷ್ಟಕರ ಎಂದು ಹೇಳಿದ್ದಾರೆ.       

short by Pawan / more at Eenadu India

Comments