Skip to main content


ಇನ್ನು ಮುಂದೆ ಪುಟ್ಟ ಮಕ್ಕಳಿಗೆ ತಪ್ಪಲಿದೆ ಹೋಂ ವರ್ಕ್ ಕಿರಿಕಿರಿ

ಹೋಮ್ ವರ್ಕ್ ನಲ್ಲಿ ಬ್ಯುಸಿಯಾಗುತ್ತಿದ್ದ ಪುಟ್ಟ ಮಕ್ಕಳಿಗೆ ಇನ್ನು ಮುಂದೆ ಆ ಕಿರಿಕಿರಿ ತಪ್ಪಲಿದೆ. ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜಾವಡೇಕರ್ ಈ ಮಾಹಿತಿಯನ್ನು ನೀಡಿದ್ದು, ಒಂದು ಮತ್ತು ಎರಡನೇ ತರಗತಿಯ ಮಕ್ಕಳಿಗೆ ಹೋಂ ವರ್ಕ್  ನೀಡುವುದನ್ನು ನಿಷೇಧಿಸಲು ಸಂಸತ್ತಿನಲ್ಲಿ ಮಸೂದೆ ಮಂಡಿಸಲಾಗುವುದು ಎಂದು ತಿಳಿಸಿದ್ದಾರೆ. ಮಕ್ಕಳು ವೇಟ್ ಲಿಫ್ಟರ್ ಗಳಲ್ಲ ಎಂದಿದ್ದ ಮದ್ರಾಸ್ ಹೈಕೋರ್ಟ್, ಶಾಲಾ ಚೀಲದ ತೂಕವು ಮಗುವಿನ ತೂಕದ ಶೇಕಡ ಹತ್ತಕ್ಕಿಂತ ಹೆಚ್ಚಿರಬಾರದೆಂದು ಅಭಿಪ್ರಾಯಪಟ್ಟಿತ್ತು.

short by Shraman Jain / more at Kannada Dunia

Comments