Skip to main content


ಖಾತೆ-ಕ್ಯಾತೆಯೇ ಮುಗಿದಿಲ್ಲ ಬಜೆಟ್ ಮಂಡಿಸಲು ಕುಮಾರಸ್ವಾಮಿ ರೆಡಿ

ಸಂಪುಟ ವಿಸ್ತರಣೆ ಬಳಿಕ ಜೆಡಿಎಸ್-ಕಾಂಗ್ರೆಸ್‌ ಶಾಸಕರ ಅಸಮಾಧಾನವೇ ಇನ್ನೂ ಶಮನವಾಗಿಲ್ಲ ಅಷ್ಟರಲ್ಲಿ ಹೊಸ ಮೈತ್ರಿ ಸರ್ಕಾರ ಬಜೆಟ್ ಮಂಡಿಸಲು ಸಿದ್ಧತೆ ಪ್ರಾರಂಭಿಸಿದೆ. ಜುಲೈ ತಿಂಗಳ ಮೊದಲ ಅಥವಾ ಎರಡನೇ ವಾರದಲ್ಲಿ ಮೈತ್ರಿ ಸರ್ಕಾರವು ಬಜೆಟ್ ಮಂಡಿಸಲಿದೆ. ಈ ಮಾಹಿತಿಯನ್ನು ಸಿಎಂ ಕುಮಾರಸ್ವಾಮಿ ಅವರು ಸುದ್ದಿಗಾರರೊಂದಿಗೆ ತಿಳಿಸಿದ್ದಾರೆ.

ಖಾತೆ ಹಂಚಿಕೆಯಿಂದ, ಮಂತ್ರಿ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಉಂಟಾಗಿರುವ ಸಮಸ್ಯೆಗಳು ವಾರದಲ್ಲಿ ಮುಗಿಯಲಿವೆ ಎಂದು ಭರವಸೆ ನೀಡಿರುವ ಕುಮಾರಸ್ವಾಮಿ ಅವರು, ರಾಜಕೀಯ ಮೇಲಾಟದಲ್ಲಿ ಆಡಳಿತ ಯಂತ್ರ ನಿಲ್ಲದಂತೆ ನೋಡಿಕೊಳ್ಳುವ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.

10-15 ದಿನಗಳಲ್ಲಿ ರೈತ ಸಾಲ ಮನ್ನಾದ ರೂಪು ರೇಷೆಗಳನ್ನು ಸಿದ್ಧಪಡಿಸಲಾಗುವುದು ಎಂದ ಅವರು, ಬಜೆಟ್‌ನಲ್ಲಿ ರೈತ ಸಾಲಮನ್ನಾದ ಘೋಷಣೆ ಮಾಡುವ ಮುನ್ಸೂಚನೆ ನೀಡಿದರು.    

short by Pawan / more at Oneindia

Comments