Skip to main content


ಬಲೂನ್‌ಗಳ ಮೂಲಕ ಗ್ರಾಮೀಣ ಭಾಗಕ್ಕೆ ವೈಫೈ: ಉತ್ತರಾಖಂಡದಲ್ಲಿ ಹೊಸ ಯೋಜನೆ

ಗ್ರಾಮೀಣ ಭಾಗಕ್ಕೂ ವೈಫೈ ಸೇವೆ ಒದಗಿಸಲು ಜಾರ್ಖಂಡ್‌ ಸರಕಾರ ಹೊಸ ಉಪಾಯ ಹುಡುಕಿದೆ. ದಾರದ ನಿಯಂತ್ರಣ ಹೊಂದಿರುವ ಹೈಡ್ರೋಜನ್‌ ತುಂಬಿದ ಬಲೂನ್‌ನಲ್ಲಿ ಕ್ಯಾಮೆರಾ, ಇಂಟರ್‌ನೆಟ್‌ ವೈಫೈ ಮಾಡೆಮ್‌ ಹಾಗೂ ಟ್ರಾನ್ಸ್‌ರಿಸೀವರ್‌ ಉಪಕರಣಗಳನ್ನು ಅಳವಡಿಸಿ, ವೈಫೈ ಸೇವೆ ನೀಡಲು ಯೋಜನೆ ರೂಪಿಸಲಾಗಿದೆ. 6 ಮೀಟರ್‌ ಉದ್ದದ ಬಲೂನ್‌ 14 ದಿನಗಳ ವರೆಗೆ ಗಾಳಿಯಲ್ಲಿ ತೇಲಾಡಲು ಅರ್ಹವಾಗಿರುತ್ತದೆ. 7.5 ಕಿ.ಮೀ ವ್ಯಾಪ್ತಿಯಲ್ಲಿ ಇಂಟರ್ನೆಟ್‌ ಸೇವೆ ಒದಗಿಸಲು ಸಾಧ್ಯವಾಗಲಿದ್ದು, 5ಎಂಬಿಪಿಎಸ್ ಸ್ಪೀಡ್‌ನಲ್ಲಿ ಬ್ರೌಸಿಂಗ್‌ ಮಾಡಬಹುದಾಗಿದೆ. ಆರಂಭದಲ್ಲಿ ಉಚಿತ ವೈಫೈ ಸೇವೆ ಒದಗಿಸಲು ತೀರ್ಮಾನಿಸಲಾಗಿದ್ದು, ಪಾಸ್‌ವರ್ಡ್‌ ಇಲ್ಲದೆ, ವೈಫೈ ಲಾಗ್‌ ಇನ್‌ ಆಗಬಹುದು ಎಂದು ಯೋಜನೆಯ ಮುಖ್ಯಸ್ಥ ಹಾಗೂ ಮಾಹಿತಿ ತಂತ್ರಜ್ಞಾನ ಅಭಿವೃದ್ಧಿ ಸಂಸ್ಥೆ(ಐಟಿಡಿಎ) ನಿರ್ದೇಶಕ ಅಮಿತ್‌ ಸಿನ್ಹಾ ತಿಳಿಸಿದ್ದಾರೆ.   

short by Pawan / more at Vijayakarnataka


Comments