Skip to main content


ರಕ್ಷಿತ್ ಶೆಟ್ಟಿಗೆ ಆಕ್ಷನ್ ಕಟ್ ಹೇಳಿದ್ರೆ ಕಂಕಣ ಭಾಗ್ಯ ಗ್ಯಾರೆಂಟಿ?!

ರಕ್ಷಿತ್ ಶೆಟ್ಟಿ ಅವರ ಸಿನಿಮಾಗಳಲ್ಲಿ 'ಕಂಕಣಭಾಗ್ಯ' ಇದೆ ಅಂತ ಎಲ್ಲರೂ ಮಾತನಾಡಿಕೊಳ್ತಿದ್ದಾರೆ. ಇದರಲ್ಲಿ ಪವಾಡನೂ ಇಲ್ಲ ಅಥವಾ ಫ್ರೀ-ಪ್ಲಾನೂ ಇಲ್ಲ. ಆದ್ರೂ ಒಂಥರಾ ಇದು ಆಶ್ಚರ್ಯ. ನಾವು ಹೇಳೋ ಈ ಮೂರು ಮದ್ವೆಯ ಕಥೆ ನೋಡಿದ್ಮೇಲೆ ನಿಮಗೂ ಶಾಕ್ ಆಗೋದ್ರಲ್ಲಿ ಅನುಮಾನನೇ ಇಲ್ಲ. ಮೊದಲು ಈ ಮೂರು ಮದ್ವೆ ಯಾರದ್ದು ಅಂತಾ ನೋಡಿ..

ನಿರ್ದೇಶಕ ಹೇಮಂತ್ ರಾವ್ ಗೆ 'ಗೋಧಿಬಣ್ಣ ಸಾಧಾರಣ ಮೈಕಟ್ಟು' ಚಿತ್ರ ಮೊದಲ ಸಿನಿಮಾ. ಈ ಚಿತ್ರದ ನಾಯಕ ರಕ್ಷಿತ್ ಶೆಟ್ಟಿ. ಈ ಚಿತ್ರ ಯಶಸ್ಸು ಕಾಣುತ್ತಿದ್ದಾಗೆ, ಹೇಮಂತ್ ಗೆ ಮತ್ತಷ್ಟು ಚಿತ್ರಗಳು ಬಂದವು. ಅದಕ್ಕೆ ಮಿಗಿಲಾಗಿ ಬ್ಯಾಚುಲರ್ ಆಗಿದ್ದ ಹೇಮಂತ್ ಕಳೆದ ವರ್ಷ ಜನವರಿ 23 ರಂದು, ತಮ್ಮ ಗೆಳತಿ 'ಬೇಬ್ ಜಾನಿ ಹಾಲ್ದಾರ್' ಅವರೊಂದಿಗೆ ವಿವಾಹವಾದರು. 

ರಕ್ಷಿತ್ ಶೆಟ್ಟಿ ಅವರ ಆಪ್ತಮಿತ್ರ ರಿಷಬ್ ಶೆಟ್ಟಿ 'ರಿಕ್ಕಿ' ಚಿತ್ರವನ್ನ ನಿರ್ದೇಶನ ಮಾಡುವ ಮೂಲಕ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದರು. ವೃತ್ತಿಯಲ್ಲಿ ಇಂಜಿನೀಯರ್ ಆಗಿರುವ ಪ್ರಗತಿ ಶೆಟ್ಟಿ ಅವರನ್ನ ಫೆಬ್ರವರಿ 9, 2017 ರಂದು ಕುಂದಾಪುರದಲ್ಲಿ ಮದುವೆಯಾದರು. 

ಇನ್ನೂ 'ಸಿಂಪಲ್ಲಾಗ್ ಒಂದು ಲವ್ ಸ್ಟೋರಿ' ಚಿತ್ರದ ಮೂಲಕ ನಿರ್ದೇಶಕರಾದ ಸಿಂಪಲ್ ಸುನಿ ಅವರು ಚೊಚ್ಚಲ ಚಿತ್ರದಲ್ಲೂ ರಕ್ಷಿತ್ ಶೆಟ್ಟಿ ಅವರೇ ನಾಯಕ. ಸುನಿ ಅವರು ಸೌಂದರ್ಯ ಎಂಬುವವರನ್ನ ಚಿಕ್ಕ ಮಗಳೂರಿನಲ್ಲಿ ಫೆ. 17, 2017ರಂದು ವಿವಾಹವಾಗಿದ್ದಾರೆ. ಸೋ, ರಕ್ಷಿತ್ ಶೆಟ್ಟಿ ಜೊತೆ ಮೊದಲ ಸಿನಿಮಾ ಮಾಡಿದವರು ಫೈಕಿ ಮದುವೆಯಾದ ಮೂರನೇ ಡೈರೆಕ್ಟರ್ ಸುನಿ.

ಅಚ್ಚರಿಯ ವಿಷಯ ಏನಪ್ಪಾ ಅಂದರೆ, ರಕ್ಷಿತ್ ಅವರ ಮುಂದಿನ ಎರಡು ಚಿತ್ರಗಳ ನಿರ್ದೇಶಕರಾದ, ಸಚಿನ್ ಹಾಗೂ ಕಿರಣ್ ರಾಜ್, ಇಬ್ಬರದ್ದು ಡೆಬ್ಯು ಚಿತ್ರ. ಆದ್ದರಿಂದ, ಅತೀ ಶೀಘ್ರದಲ್ಲೇ ಸಚಿನ್ ಹಾಗು ಕಿರಣ್ ಅವರಿಗೆ ಕಂಕಣ ಭಾಗ್ಯ ಬಂದರೂ ಬರಬಹುದು. ಯಾವುದಕ್ಕೂ ಕಾಡು ನೋಡೋಣ.. 😜😋

short by Pawan / courtesy: Filmibeat

Comments