Skip to main content


ಪರೀಕ್ಷಾ ಕೊಠಡಿಗೆ ಮೇಲ್​ನಲ್ಲಿ ಪ್ರಶ್ನೆ ಪತ್ರಿಕೆ : ಅಕ್ರಮ ತಡೆಗೆ ವಿಟಿಯು ಕ್ರಮ

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಇಂಜಿನೀರಿಂಗ್ ವಿದ್ಯಾರ್ಥಿಗಳಿಗೆ ಇನ್ಮುಂದೆ ನೋ ಟೆನ್ಶನ್.  ಪ್ರಶ್ನೆ ಪತ್ರಿಕೆ ಸೋರಿಕೆಯಾಗಬಹುದು ಎಂಬ ಆತಂಕದಲ್ಲಿದ್ದ ವಿದ್ಯಾರ್ಥಿಗಳು ಇನ್ನುಮುಂದೆ ಯಾವುದೇ ಸಮಸ್ಯೆ ಇಲ್ಲದೆ ಪರೀಕ್ಷೆ ಬರೆಯಬಹುದು. 

ಹೆಚ್ಚುತ್ತಿರುವ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಗಳಿಗೆ ಬ್ರೇಕ್ ಹಾಕಲು ವಿಟಿಯು ಮುಂದಾಗಿದೆ. ಪರೀಕ್ಷೆ ಪ್ರಾರಂಭಕ್ಕೂ 20ನಿಮಿಷ ಮುನ್ನ ಎಲ್ಲಾ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರದಲ್ಲಿ ಹಾಜರಾಗಿರಬೇಕು. ಇಲ್ಲವಾದ್ರೆ ಪರೀಕ್ಷೆ ಬರೆಯಲು ಅವಕಾಶ ನೀಡುವುದಿಲ್ಲ ಎಂಬ ಆದೇಶವನ್ನು ವಿಟಿಯು ಹೊರಡಿಸಿದೆ.

ಇನ್ನು ವಿದ್ಯಾರ್ಥಿಗಳು  ಪರೀಕ್ಷಾ ಹಾಲ್ ಗೆ ತಲುಪಿದ ಮೇಲೆ ಪ್ರಶ್ನೆ ಪತ್ರಿಕೆಗಳನ್ನು ಆಯಾ ಪರೀಕ್ಷಾ ಕೇಂದ್ರಗಳಿಗೆ ಇ-ಮೇಲ್ ಮೂಲಕ  ಕಳುಹಿಸಲು ವಿಟಿಯು ಆಡಳಿತ ಮಂಡಳಿ ತೀರ್ಮಾನಿಸಿದೆ‌. ಈ ರೀತಿ ಮಾಡುವುದರಿಂದ  ಯಾವುದೇ ಪ್ರಶ್ನೆ ಪತ್ರಿಕೆ ಸೋರಿಕೆ ಅಸಾಧ್ಯ ಅಂತಾರೆ ಇಂಜಿನೀರಿಂಗ್ ಕಾಲೇಜ್ ಪ್ರಾಂಶುಪಾಲರು.   

short by Pawan / more at News18

Comments