Skip to main content


ಸುನಾಮಿ ಎಬ್ಬಿಸಿದ ದಿ ವಿಲನ್ ಟೀಸರ್... ದಾಖಲೆಗಳನ್ನು ಚಿಂದಿ ಉಡಾಯಿಸಿದ ಕಿಚ್ಚ

ಹೌದು, ನಿನ್ನೆ ಸಂಜೆ ದಿ ವಿಲನ್ ಚಿತ್ರದ ಎರಡು ಟೀಸರ್ ಬಿಡುಗಡೆ ಮಾಡಲಾಯಿತು. ಸುದೀಪ್ ಹಾಗೂ ಶಿವಣ್ಣನ ಪಾತ್ರದ ಟೀಸರ್​ಗಳನ್ನು ಪ್ರತ್ಯೇಕವಾಗಿ ರಿಲೀಸ್ ಮಾಡಲಾಗಿದೆ. 
ಟೀಸರ್ ಬಿಡುಗಡೆಯಾಗುತ್ತಲೇ ಯೂಟ್ಯೂಬ್​ನಲ್ಲಿ ಸುನಾಮೆ ಸೃಷ್ಟಿಸಿದೆ. ಸುದೀಪ್ ಅವರ ಟೀಸರ್ ಕೇವಲ ಒಂದು ಗಂಟೆಯಲ್ಲಿಯೇ 3 ಲಕ್ಷ ಬಾರಿ ವೀಕ್ಷಣೆಯಾಗಿದೆ. ಇದರ ಜತೆ ಶಿವಣ್ಣನ ಟೀಸರ್ ಕೂಡ ಒಂದು ಲಕ್ಷಕ್ಕೂ ಹೆಚ್ಚು ಸಾರಿ ವೀಕ್ಷಿಸಲ್ಪಟ್ಟಿದೆ. ಸುದೀಪ್ ಅವರ ಟೀಸರ್ ಓಟಕ್ಕೆ ಇಡೀ ಸ್ಯಾಂಡಲ್​ವುಡ್ ಬೆಚ್ಚಿ ಬಿದ್ದಿದೆ. ಟ್ವಿಟರ್ ಹಾಗೂ ಫೇಸ್​ಬುಕ್​ನಲ್ಲಿ ಸುದೀಪ್​ಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.  

short by Pawan!

Comments