Skip to main content


ಕುರುಕ್ಷೇತ್ರ ಸಿನಿಮಾ ರಿಲೀಸ್ ಗೆ ರವಿಚಂದ್ರನ್ ಹೂಂ ಅನ್ನಬೇಕಂತೆ !

ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಅಭಿನಯದ ಬಹುನಿರೀಕ್ಷಿತ ಸಿನಿಮಾ ಕುರುಕ್ಷೇತ್ರ. ಈ ಸಿನಿಮಾ ಯಾವಾಗ ರಿಲೀಸ್​ ಆಗುತ್ತೆ ಅನ್ನೋದು ಸದ್ಯದ ವಿಚಾರ. ಈಗಾಗ್ಲೆ ಸಾಕಷ್ಟು ವಿಚಾರಗಳ ಕುರಿತು ಸುದ್ದಿಯಾಗಿರೋ ಈ ಚಿತ್ರ ಇದೀಗ ಬಿಡುಗಡೆ ಹಂತ ತಲುಪಿದ್ರು ಬಿಡುಗಡೆಯಾಗ್ತಾ ಇಲ್ಲ. ಆದ್ರೆ ಈ ವಿಷಯಕ್ಕೆ ಈಗೊಂದು ಮೇಜರ್​ ಟ್ವಿಸ್ಟ್ ಸಿಕ್ಕಿದೆ. ಕುರುಕ್ಷೇತ್ರ ಸಿನಿಮಾ ತೆರೆಗೆ ಬರಬೇಕು ಅಂದ್ರೆ ಕ್ರೇಜಿಸ್ಟಾರ್​​ ರವಿಚಂದ್ರನ್​ ಹೂಂ ಅನ್ನಬೇಕಂತೆ. ಹೌದು, ರವಿಚಂದ್ರನ್​ ಟೈಮ್​ ಫ್ರೀ ಮಾಡ್ಕೊಂಡು ಸಿನಿಮಾದ ಡಬ್ಬಿಂಗ್​​ ಮುಗಿಸಿಕೊಡಬೇಕು. ರವಿಚಂದ್ರನ್​ ಹೊರತು ಪಡಿಸಿ ಉಳಿದೆಲ್ಲಾ ಕಲಾವಿದರು, ಡಬ್ಬಿಂಗ್ ಮುಗಿಸಿಯಾಗಿದೆ. ಸಿನಿಮಾದ ಗ್ರಾಫಿಕ್ಸ್​ ವರ್ಕ್​, ಡಿಐ, ರಿ ರೇಕಾರ್ಡಿಂಗ್​ ಎಲ್ಲವೂ ಏಕಕಾಲದಲ್ಲಿ ನಡೀತಾ ಇದೆ. ಆದ್ರೆ ರವಿಚಂದ್ರನ್ ನಟಿಸಿರೋ ಕೃಷ್ಣನ ಪಾತ್ರದ ಡಬ್ಬಿಂಗ್​​ ಅಷ್ಟೇ ಬಾಕಿ ಉಳಿದಿದೆ.        

short by Pawan / more at Balkani News

Comments