Skip to main content


ಇಂಡೋ-ಅಫ್ಘಾನ್‌ ಐತಿಹಾಸಿಕ ಟೆಸ್ಟ್‌‌: ಶಿಖರ್‌ ಧವನ್‌ಗೆ ಎಚ್ಚರಿಕೆ ನೀಡಿದ ರಶೀದ್‌ ಖಾನ್‌!

ಜೂನ್‌ 14ರಿಂದ ಕ್ರಿಕೆಟ್‌ ಶಿಶು ಅಫ್ಘಾನಿಸ್ತಾನ್‌ ಹಾಗೂ ಟೀಂ ಇಂಡಿಯಾ ಕ್ರಿಕೆಟ್‌ ತಂಡಗಳ ನಡುವೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಏಕೈಕ ಐತಿಹಾಸಿಕ ಟೆಸ್ಟ್‌‌ ಪಂದ್ಯ ನಡೆಯಲಿದ್ದು, ಈಗಾಗಲೇ ಅಫ್ಘಾನ್‌ ತಂಡ ಬೆಂಗಳೂರಿಗೆ ಬಂದಿಳಿದಿದೆ.

ಇದರ ಮಧ್ಯೆ ಟೀಂ ಇಂಡಿಯಾ ತಂಡದ ಆರಂಭಿಕ ಆಟಗಾರ ಶಿಖರ್‌ ಧವನ್‌ಗೆ ಅಫ್ಘಾನಿಸ್ತಾನದ ಸ್ಪಿನ್ನರ್‌ ರಶೀದ್‌ ಖಾನ್‌ ಎಚ್ಚರಿಕೆ ನೀಡಿದ್ದಾರೆ. ಟೆಸ್ಟ್‌‌ ಪಂದ್ಯದಲ್ಲಿ ಟೀಂ ಇಂಡಿಯಾದ ಟಾಪ್‌ ಆರ್ಡರ್‌ ಬ್ಯಾಟ್ಸ್‌ಮನ್‌ ಶಿಖರ್‌ ಧವನ್‌ ಸೇರಿ ಪ್ರಮುಖ ಆಟಗಾರರಿಗೆ ಕಠಿಣ ಸವಾಲು ನೀಡಲು ನಾನು ಸಜ್ಜಾಗಿದ್ದೇನೆ ಎಂದು ತಿಳಿಸಿದ್ದಾರೆ. ಎದುರಾಳಿ ತಂಡವನ್ನ ಮಣಿಸಲು ನಾವು ಹೊಸ ಯೋಜನೆ ಹಾಕಿಕೊಂಡಿದ್ದು, ಅದರ ಪ್ರಕಾರ ಟೆಸ್ಟ್‌‌ ಪಂದ್ಯದಲ್ಲಿ ಪ್ರದರ್ಶನ ನೀಡುವುದಾಗಿ ರಶೀದ್‌ ಖಾನ್‌ ಹೇಳಿಕೊಂಡಿದ್ದಾರೆ.    

short by Pawan / more at Eenadu India

Comments