Skip to main content


ಉಗ್ರ ನಿಗ್ರಹ ನಿಕಟ ವಿಚಕ್ಷಣೆ: ಪಾಕಿಸ್ಥಾನಕ್ಕೆ ಅಮೆರಿಕದ ಖಡಕ್‌ ಸಂದೇಶ

ಪಾಕಿಸ್ಥಾನ ತನ್ನ ನೆಲದಲ್ಲಿನ ಉಗ್ರರನ್ನು ಸಂಪೂರ್ಣವಾಗಿ ಮಟ್ಟಹಾಕುವ ಕೆಲಸ ಮಾಡಿ ತೋರಿಸುವುದನ್ನು ಅಮೆರಿಕ ಕಾತರದಿಂದ ಎದುರುನೋಡುತ್ತಿದೆ ಎಂಬ ಖಡಕ್‌ ಸಂದೇಶವನ್ನು ಟ್ರಂಪ್‌ ಆಡಳಿತೆ ಇಸ್ಲಾಮಾಬಾದ್‌ ಗೆ ರವಾನಿಸಿದೆ.

ತನ್ನ ದೇಶದಲ್ಲಿ ಕಾರ್ಯಾಚರಿಸತ್ತಿರುವ ಉಗ್ರರನ್ನು, ವಿಶೇಷವಾಗಿ ಹಕಾನಿ ಜಾಲವನ್ನು, ಪಾಕಿಸ್ಥಾನ ಸಂಪೂರ್ಣವಾಗಿ ನಿರ್ನಾಮ ಮಾಡಬೇಕು ಎಂದು ಹೇಳಿರುವ ಅಮೆರಿಕ, ಉಗ್ರ ನಿಗ್ರಹದಲ್ಲಿ ಪಾಕಿಸ್ಥಾನಕ್ಕೆ ವಾಷಿಂಗ್ಟನ್‌ ಮಹತ್ವ ನೀಡುತ್ತದೆ ಎಂಬುದನ್ನು ಪುನರಚ್ಚರಿಸಿದೆ.

ಇದೇ ವೇಳೆ ಪಾಕಿಸ್ಥಾನ ತಾನು ಈಗಲೂ ಉಗ್ರ ನಿಗ್ರಹ ಕಾರ್ಯಾಚರಣೆಯನ್ನು ಪರಿಣಾಮಕಾರಿಯಾಗಿ ಮುಂದುವರಿಸುತ್ತಿದ್ದೇನೆ; ಆದರೆ ಅದರಿಂದ ಪ್ರಜೆಗಳಿಗೆ ಮತ್ತು ಸರಕಾರಕ್ಕೆ ಆಗುವ ಹಾನಿಯ ಬಗ್ಗೆ ಕೂಡ ತಾನು ಜಾಗೃತೆ ವಹಿಸುತ್ತಿದ್ದೇನೆ ಎಂದು ಹೇಳಿದೆ.    

short by Pawan / more at Udayavani

Comments