Skip to main content


ಐಪಿಎಲ್ ಬೆಟ್ಟಿಂಗ್ ಪ್ರಕರಣ : ಪೊಲೀಸರಿಗೆ ಹೇಳಿಕೆ ನೀಡಿದ ಅರ್ಬಾಜ್ ಖಾನ್

ಸೂಪರ್‍ಸ್ಟಾರ್ ಸಲ್ಮಾನ್ ಖಾನ್ ಸಹೋದರ ಹಾಗೂ ನಟ, ನಿರ್ದೇಶಕ ಮತ್ತು ನಿರ್ಮಾಪಕ ಅರ್ಬಾಜ್ ಖಾನ್ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ದಂಧೆ ಪ್ರಕರಣದ ಸಂಬಂಧ ಇಂದು ಪೊಲೀಸರ ಮುಂದೆ ಹಾಜರಾಗಿ ತಮ್ಮ ಹೇಳಿಕೆಯನ್ನು ದಾಖಲಿಸಿದರು. ಬೆಟ್ಟಿಂಗ್ ಪ್ರಕರಣ ಕುರಿತು ನಿನ್ನೆ ಥಾಣೆ ನಗರ ಪೊಲೀಸರು ತಮ್ಮ ಮುಂದೆ ಹಾಜರಾಗಿ ಈ ಕುರಿತು ಹೇಳಿಕೆ ನೀಡುವಂತೆ 50 ವರ್ಷ ಖಾನ್‍ಗೆ ಸೂಚಿಸಿದ್ದರು. ಆ ಹಿನ್ನೆಲೆಯಲ್ಲಿ ಇಂದು ಪೊಲೀಸರ ಮುಂದೆ ಹಾಜರಾಗಿ ಅವರು ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡಿ ತಮ್ಮ ಹೇಳಿಕೆಯನ್ನು ದಾಖಲಿಸಿದ್ದಾರೆ.     

short by Pawan!

Comments