Skip to main content


ನನಗೆ ಮುಜುರಾಯಿ ಖಾತೆ ಕೊಡಿ, ದೇವಸ್ಥಾನ ಸುತ್ಕೊಂಡು ಕಾಲ ಕಳೀತೀನಿ : ಡಿಕೆಶಿ ಅಸಮಾಧಾನ

ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಸರ್ಕಾರದ ಅಗೋಚರ ಲೆಕ್ಕಾಚಾರಗಳಿಂದ ಅಸಮಾಧಾನಗೊಂಡಿರುವ ಹಿರಿಯ ನಾಯಕ ಡಿ.ಕೆ.ಶಿವಕುಮಾರ್,ಸಂಪುಟ ವಿಸ್ತರಣೆ ಮಾಡಿದಾಗ ನನಗೆ ಮುಜುರಾಯಿ ಖಾತೆ ಕೊಡಿ.ದೇವಸ್ಥಾನಗಳನ್ನು ಸುತ್ತಿಕೊಂಡು ಕಾಲ ಕಳೆಯುತ್ತೇನೆ ಎಂದು ವರಿಷ್ಟರೆದುರು ಹೇಳಿರುವ ಘಟನೆ ಬೆಳಕಿಗೆ ಬಂದಿದೆ. ಉನ್ನತ ಮೂಲಗಳು ಈ ವಿಷಯವನ್ನು ಸ್ಪಷ್ಟ ಪಡಿಸಿದ್ದು,ಮೈತ್ರಿಕೂಟ ಸರ್ಕಾರದಲ್ಲಿ ತಮಗೆ ಇಂಧನ ಖಾತೆ ನೀಡಬೇಕು ಎಂದು ಪಟ್ಟು ಹಿಡಿದಿದ್ದ ಡಿ.ಕೆ.ಶಿವಕುಮಾರ್ ಅವರಿಗೆ ವರಿಷ್ಟರ ಧೋರಣೆಯಿಂದ ಕಸಿವಿಸಿಯಾಗಿದೆ.

ಸರ್ಕಾರ ರಚಿಸಲು ಬೇಷರತ್ ಬೆಂಬಲ ನೀಡಿದ್ದು ಐದು ವರ್ಷಗಳ ಕಾಲ ಕುಮಾರಸ್ವಾಮಿಯವರೇ ಸಿಎಂ ಆಗಿರಲಿ ಎಂದು ಹೇಳಿದ್ದೇವೆ.ಅದೇ ರೀತಿ ನಿಮಗೆ ಬೇಕಾದ ಖಾತೆಗಳನ್ನು ನೀವಿಟ್ಟುಕೊಳ್ಳಿ ಎಂದು ಹೇಳಿದ್ದೇವೆ.ಹೀಗಾಗಿ ಖಾತೆಗಾಗಿ ಯಾರೂ ತಕರಾರು ಮಾಡಬೇಡಿ ಎಂದು ಕೈ ಪಾಳೆಯದ ವರಿಷ್ಟರು ರಾಜ್ಯದ ಪ್ರಮುಖ ನಾಯಕರಿಗೆ ಸೂಚಿಸಿದ್ದಾರೆ.      

short by Pawan / more at Eesanje

Comments