Skip to main content


ಎಸ್ಕಾಂಗಳಿಗೆ ಮೋದಿ ಸರ್ಕಾರದಿಂದ ಶಾಕ್: ಲೋಡ್‍ಶೆಡ್ಡಿಂಗ್ ಮಾಡಿದರೆ ಬೀಳುತ್ತೆ ಭಾರೀ ದಂಡ!

ದೇಶದಲ್ಲಿ ಶೇ.15ರಷ್ಟು ಆರ್ಥಿಕ ನಷ್ಟ ವಿದ್ಯುತ್ ಕಡಿತದಿಂದಾಗಿ ಸಂಭವಿಸುತ್ತಿದೆ. ಇದು ದೇಶದ ಬೆಳವಣಿಗೆಗೆ ಮಾರಕವಾಗಿದೆ. ವಿದ್ಯುತ್ ಕಡಿತದಿಂದಾಗಿ ಶೇ.15 ಹಾಗೂ ಅದಕ್ಕಿಂತ ಹೆಚ್ಚಿನ ನಷ್ಟ ಉಂಟಾದರೆ ಆ ನಷ್ಟವನ್ನು ವಿದ್ಯುತ್ ವಿತರಣಾ ಸಂಸ್ಥೆಗಳೇ ಪಾವತಿ ಮಾಡಬೇಕು ಎಂದು ಕೇಂದ್ರ ಇಂಧನ ಸಚಿವರಾದ ಆರ್ ಕೆ ಸಿಂಗ್‍ರವರು 7 ರಾಜ್ಯದ ರಾಜಧಾನಿಗಳ ಪತ್ರಕರ್ತರ ಜೊತೆ ವಿಡಿಯೋ ಕಾನ್ಫರೆನ್ಸ್ ವೇಳೆ ಹೇಳಿದ್ದಾರೆ. ಈ ವೇಳೆ ದೇಶಾದ್ಯಂತ ಇರುವ ಎಲ್ಲಾ ವಿದ್ಯುತ್ ವಿತರಣಾ ಸಂಸ್ಥೆಗಳೇ ಲೋಡ್ ಶೆಡ್ಡಿಂಗ್ ಮಾಡಿದರೆ ಇದರಿಂದಾಗುವ ನಷ್ಟವನ್ನು ಖುದ್ದು ಸಂಸ್ಥೆಗಳೇ ಭರಿಸಬೇಕು ಎಂದು ತಿಳಿಸಿದ್ದಾರೆ. ದೇಶದಲ್ಲಿ ದಿನೇ ದಿನೇ ಏರಿಕೆಯಾಗುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ಕುರಿತು ಮಾತನಾಡಿದ ಅವರು ಶೀಘ್ರವಾಗಿ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.

short by Shraman / more at Public TV

Comments