Skip to main content


ಉದ್ಯಮಿಗೆ ಉಂಡೆನಾಮ ತಿಕ್ಕಲು ಹೋಗಿ ಕಂಬಿ ಎಣಿಸುತ್ತಿರುವ ಟಗರು ನಟ.!

ಪೊಲೀಸ್ ಕಮಿಷನರ್ ನನಗೆ ತುಂಬಾ ಕ್ಲೋಸ್.! ಶಿವಣ್ಣ ನನಗೆ ಸ್ವಂತ ಅಣ್ಣ ಇದ್ಹಾಗೆ.!'' - ಹೀಗಂತ ಬಿಟ್ಟಿ ಬಿಲ್ಡಪ್ ಕೊಟ್ಟುಕೊಂಡು ಅದೆಷ್ಟೋ ಜನಸಾಮಾನ್ಯರಿಗೆ ಯಾಮಾರಿಸಿರುವ ಆಸಾಮಿ ಬೇಬಿ ಕೃಷ್ಣ ಅಲಿಯಾಸ್ ವೈ.ಕೆ.ದೇವನಾಥ.! ಅಷ್ಟಕ್ಕೂ, ಯಾರೀ ಬೇಬಿ ಕೃಷ್ಣ ಅಂದ್ಕೊಂಡ್ರಾ... ಸ್ವಲ್ಪ 'ಟಗರು' ಸಿನಿಮಾ ನೆನಪಿಸಿಕೊಳ್ಳಿ... 'ಟಗರು' ಚಿತ್ರದಲ್ಲಿ ಪೊಲೀಸರ ಎನ್ ಕೌಂಟರ್ ಗೆ ಬಲಿಯಾಗುವ ಪುಡಿ ರೌಡಿ ಬೇಬಿ ಕೃಷ್ಣ ಪಾತ್ರದಲ್ಲಿ ಕಾಣಿಸಿಕೊಂಡಾತನೇ ವೈ.ಕೆ.ದೇವನಾಥ.

ಉತ್ತರಹಳ್ಳಿ ಬಳಿ 30*50 ಸೈಟ್ ಖರೀದಿ ಮಾಡಲು ಮುಂದಾದ ಉದ್ಯಮಿಯೊಬ್ಬರು, ವೈಕೆ.ದೇವನಾಥ ಕೊಟ್ಟ ಬಿಲ್ಡಪ್ ಗೆ ಬೆರಗಾಗಿ ಬರೋಬ್ಬರಿ 52 ಲಕ್ಷ ರೂಪಾಯಿಯನ್ನು ಅಡ್ವಾನ್ಸ್ ರೂಪದಲ್ಲಿ ಆತನ ಅಕೌಂಟ್ ಗೆ ಟ್ರಾನ್ಸ್ ಫರ್ ಮಾಡಿದ್ದರು. 75 ಲಕ್ಷಕ್ಕೆ ಸೈಟ್ ಖರೀದಿ ಮಾಡಲು ಮೊದಲು ಮಾತುಕತೆ ಆಗಿತ್ತು. ಆದ್ರೆ, ಯಾವಾಗ 52 ಲಕ್ಷ ರೂಪಾಯಿ ತನ್ನ ಅಕೌಂಟ್ ಗೆ ಬಿತ್ತೋ, ಆಗ 1.2 ಕೋಟಿ ಕೊಟ್ಟರೆ ಮಾತ್ರ ನೋಂದಣಿ ಮಾಡಿ ಕೊಡುವೆ ಎಂದು ವೈಕೆ.ದೇವನಾಥ ಕ್ಯಾತೆ ಶುರು ಮಾಡಿದ.

ವೈಕೆ.ದೇವನಾಥ ಸಹವಾಸವೇ ಬೇಡ, ಕೊಟ್ಟಿರುವ ಅಡ್ವಾನ್ಸ್ ವಾಪಸ್ ಮಾಡಿ ಅಂತ ಉದ್ಯಮಿ ಕೇಳಿಕೊಂಡರು. ಆದ್ರೆ, ಉದ್ಯಮಿಗೆ ವೈಕೆ.ದೇವನಾಥ ಬೆದರಿಕೆ ಹಾಕಿದ್ದ. ಬಾಯಿಗೆ ಬಂದ ಹಾಗೆ ಮಾತನಾಡಿದ್ದ. ಇದರಿಂದ ಬೇಸೆತ್ತ ಉದ್ಯಮಿ ಸುಬ್ರಮಣ್ಯಪುರ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದರು. ಮೂರು ತಿಂಗಳ ಹಿಂದೆ ಕೊಟ್ಟಿದ್ದ ದೂರಿನ ಅನ್ವಯ ಜೂನ್ 19 ರಂದು ವೈಕೆ.ದೇವನಾಥನನ್ನ ಪೊಲೀಸರು ಬಂಧಿಸಿದ್ದಾರೆ.    

short by Pawan / more at Filmibeat

Comments