Skip to main content


ಅಂಬಾನಿ ಪುತ್ರನ ನಿಶ್ಚಿತಾರ್ಥಕ್ಕೆ ದಿನಾಂಕ ಫಿಕ್ಸ್

ಭಾರತದ ಖ್ಯಾತ ಶ್ರೀಮಂತ ಉದ್ಯಮಿ, ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿಯವರ ಪುತ್ರ ಆಕಾಶ್ ಅಂಬಾನಿಯವರ ನಿಶ್ಚಿತಾರ್ಥ ಜೂನ್ 30 ರಂದು ನಿಗದಿಯಾಗಿದೆ. ಭಾರತದ ರೋಸಿ ಬ್ಲೂ ಡೈಮಂಡ್ ಕಂಪನಿಯ ಮುಖ್ಯಸ್ಥರಾದ ರಸೆಲ್ ಮೆಹ್ತಾ ಮಗಳು ಶ್ಲೋಕಾರ ಜೊತೆ ನಿಶ್ಚಿತಾರ್ಥ ನಡೆಯಲಿದ್ದು, ನಿಶ್ಚಿತಾರ್ಥ ಕಾರ್ಯಕ್ರಮವನ್ನು ಅಂಟಿಲಾದಲ್ಲಿರುವ ಅಂಬಾನಿಯವರ ನಿವಾಸದಲ್ಲಿ ಅದ್ಧೂರಿಯಾಗಿ ನೆರವೇರಿಸಲು ಕುಟುಂಬಸ್ಥರು ನಿರ್ಧರಿಸಿದ್ದಾರೆ. ನಿಶ್ಚಿತಾರ್ಥ ಹಿನ್ನೆಲೆಯಲ್ಲಿ ಈ ನವ ಜೋಡಿಯು ಫೋಟೋ ಶೂಟ್ ನಡೆಸಿದ್ದು, ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿವೆ. ಮಾರ್ಚ್ 24ರಂದು ಮುಕೇಶ್ ಅಂಬಾನಿ ಹಾಗೂ ಅಜ್ಜಿ ಕೋಕಿಲಬೇನ್ ಸಮ್ಮುಖದಲ್ಲಿ ಗೋವಾದಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಆಕಾಶ್‍ರವರು ಶ್ಲೋಕಾ ಮೆಹ್ತಾಗೆ ಪ್ರೇಮ ನಿವೇದನೆ ಮಾಡಿದ್ದರು.  

short by Pawan / more at Public Tv

Comments