Skip to main content


ನಿಧಿ ಅಗರ್ವಾಲ್ ಜೊತೆಗಿನ ಸಂಬಂಧ ಬಾಯ್ಬಿಟ್ಟ ಕೆಎಲ್ ರಾಹುಲ್

ಈ ಹಿಂದೆ ರಾಹುಲ್ ಮತ್ತು 'ಮುನ್ನಾ ಮೈಕಲ್' ಬಾಲಿವುಡ್ ಚಿತ್ರದ ನಟಿ ನಿಧಿ ಅಗರ್ವಾಲ್ ಇಬ್ಬರೂ ಮುಂಬೈಯ ಬಾಂದ್ರಾದಲ್ಲಿನ ಹೋಟೆಲೊಂದರಿಂದ ಹೊರಬರುತ್ತಿದ್ದಾಗ ಸಾರ್ವಜನಿಕರ ಕಣ್ಣಿಗೆ ಬಿದ್ದಿದ್ದರು. ಆ ಸಂದರ್ಭ ಫೋಟೋಗ್ರಾಫರ್ ಒಬ್ಬರು ಇಬ್ಬರ ಫೋಟೋವನ್ನೂ ಕ್ಲಿಕ್ಕಿಸಿದ್ದರು. ಆ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿಯಾಗಿ ಹರಿದಾಡಿದ್ದವು. ಆ ಬಳಿಕ ಇಬ್ಬರ ಬಗ್ಗೆಯೂ ಗುಸುಗುಸುಗಳೂ ಶುರುವಾಗಿದ್ದವು.

ಈ ಬಗ್ಗೆ ಖಾಸಗಿ ಟಿವಿ ವಾಹಿನಿಯ ಕಾರ್ಯಕ್ರಮ 'ಓಪನ್ ಹೌಸ್ ವಿತ್ ರೆನಿಲ್'ನಲ್ಲಿ ಪ್ರತಿಕ್ರಿಯಿಸಿದ ರಾಹುಲ್, ನಾನು ಮತ್ತು ನಿಧಿ ಕಾಲೇಜ್ ದಿನಗಳಿಂದಲೂ ಸ್ನೇಹಿತರು. ನಾವು ಉತ್ತಮ ಸ್ನೇಹಿತರಷ್ಟೇ. ನಮ್ಮಿಬ್ಬರ ಕುರಿತು ಕೇಳಿ ಬಂದಿರುವ ಮಾತುಗಳೆಲ್ಲಾ ಸುಳ್ಳು' ಎಂದಿದ್ದಾರೆ. 'ನಿಧಿ ಮತ್ತು ನಾನು ಹಲವು ವರ್ಷಗಳಿಂದ ಪರಿಚಯವಿದ್ದ ಕಾರಣ ಹೋಟೆಲ್ ನಲ್ಲಿ ಭೇಟಿಯಾಗಿದ್ದೆವು. ಅಲ್ಲಿ ಆತ್ಮೀಯವಾಗಿ ಮಾತನಾಡಿದ್ದೆವು. ಆದರೆ ಅದನ್ನೇ ಎಲ್ಲರೂ ತಪ್ಪಾಗಿ ಭಾವಿಸಿದ್ದಾರಷ್ಟೇ' ಎಂದು ರಾಹುಲ್ ತಿಳಿಸಿದ್ದಾರೆ.   

short by Pawan / more at MyKhel

Comments