Skip to main content


ತ್ರಿವರ್ಣ ಧ್ವಜ ನೆಲಕ್ಕೆಸೆದ ಅಭಿಮಾನಿ; ಹೃದಯ ಗೆದ್ದ ಛೆಟ್ರಿ

ಭಾರತೀಯ ಫುಟ್ಬಾಲ್ ತಂಡದ ನಾಯಕ ಸುನಿಲ್ ಛೆಟ್ರಿ 100 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡುವ ಮೂಲಕ ನೂತನ ಮೈಲುಗಲ್ಲು ಸ್ಥಾಪಿಸಿದ್ದರು. ಇಂಟರ್ ಕಾಂಟಿನೆಂಟಲ್ ಕಪ್‌ನಲ್ಲಿ ಕೀನ್ಯಾ ವಿರುದ್ಧ ಸಾಗಿದ ತಮ್ಮ 100ನೇ ಪಂದ್ಯದಲ್ಲೂ ಎರಡು ಗೋಲುಗಳನ್ನು ಸಿಡಿಸಿದ ಛೆಟ್ರಿ 3-0 ಗೋಲುಗಳ ಅಂತರದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು. ಈ ನಡುವೆ ಪಂದ್ಯ ಮುಗಿದ ಬಳಿಕ ಪೆವಿಲಿಯನ್‌ಗೆ ಹಿಂತಿರುಗಿದ್ದ ವೇಳೆ ಸ್ಟೇಡಿಯಂನಲ್ಲಿದ್ದ ಅಭಿಮಾನಿಯೊಬ್ಬನ ಕೈಯಿಂದ ಆಕಸ್ಮಾತ್ ಆಗಿ ಭಾರತದ ತ್ರಿವರ್ಣ ಧ್ವಜವು ನೆಲಕ್ಕೆ ಬಿದ್ದಿತ್ತು. ಈ ವೇಳೆಯಲ್ಲಿ ತಕ್ಷಣವೇ ಕಾರ್ಯ ಪ್ರವೃತ್ತರಾದ ಛೆಟ್ರಿ ತ್ರಿವರ್ಣ ಧ್ವಜ ನೆಲದಿಂದ ತೆಗೆಯಲು ನೆರವಾದರು. ತದಾ ಬಳಿಕ ಅಭಿಮಾನಿಯತ್ತ ಕೈ ಮುಗಿದು ಈ ರೀತಿಯಾಗದಂತೆ ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಿದರು.    

short by Pawan / more at Vijayakarnataka

Comments