Skip to main content


ಸುದ್ದಿ ಸ್ಪೋಟ: ಪತ್ರಕರ್ತೆ ಗೌರಿಲಂಕೇಶ್ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್

ಪತ್ರಕರ್ತೆ ಗೌರಿಲಂಕೇಶ್ ಹತ್ಯೆ ಕಳೆಯುತ್ತ ಬಂದರೂ ಕೂಡ ತನಿಖೆಯಲ್ಲಿ ನಿರೀಕ್ಷಿತ ಪ್ರಗತಿಯನ್ನು ಅಧಿಕಾರಿಗಳು ಕಂಡಿಲ್ಲ ಎನ್ನುವ ಆರೋಪದ ನಡುವೆಯೇ ಗೌರಿ ಹತ್ಯೆಯ ಹಿಂದೆ ಸನಾತನ ಸಂಸ್ಥೆಯ ಕೈವಾಡವಿರುವ ಆರೋಪ ಕೇಳಿಬಂದಿದೆ. ಅಲ್ಲದೇ ಆರೋಪಕ್ಕೆ ಪೂರಕವಾಗುವಂತೆ ಸನಾತನ ಸಂಸ್ಥೆಯ ವಿರುದ್ಧ ಸಾಕ್ಷಿಯೊಂದು ದೊರೆತಿದೆ ಎನ್ನುವ ಆರೋಪದ ಮಾತುಗಳು ಕೇಳಿ ಬಂದಿದೆ.

ಮದ್ದೂರಿನ ಅನ್ನಪೂರ್ಣೇಶ್ವರಿ ಕಲ್ಯಾಣ ಮಂದಿರದಲ್ಲಿ ಸನಾತನ ಸಂಸ್ಥೆಯ ಸಭೆ ನಡೆದಿದ್ದು, 2500 ರೂಪಾಯಿಗಳಿಗೆ ಅನ್ನಪೂರ್ಣೇಶ್ವರಿ ಕಲ್ಯಾಣ ಮಂದಿರವನ್ನ ಹಿಂದೂ ಯುವಸೇನಾ ಅಧ್ಯಕ್ಷನಾಗಿದ್ದ ಗೌರಿ ಹತ್ಯೆಯಲ್ಲಿ ಪ್ರಮುಖ ಆರೋಪಿ ಅಂತ ಹೇಳಲಾಗುತ್ತಿರುವ ನವೀನ್ ಬಾಡಿಗೆಗೆ ಪಡೆದಿದ್ದನಂತೆ ಎನ್ನುವ ಮಾಹಿತಿಯನ್ನು ಎಸ್ಐಟಿ ಅಧಿಕಾರಿಗಳು ಕಲೆಹಾಕಿದ್ದಾರೆ.   

short by Pawan / more at Kannada News Now

Comments