Skip to main content


ಶಿಲ್ಪಾ ಶೆಟ್ಟಿಗೆ ತುಳುವಿನಲ್ಲೇ ಶುಭ ಕೋರಿದ ಸುನಿಲ್ ಶೆಟ್ಟಿ

ಬಾಲಿವುಡ್‌ನ ಖ್ಯಾತ ತಾರೆ ಶಿಲ್ಪಾ ಶೆಟ್ಟಿ ಶುಕ್ರವಾರ ಹುಟ್ಟುಹಬ್ಬ ಆಚರಿಸಿಕೊಂಡಿದ್ದು, ಬಾಲಿವುಡ್‌ನ ಮತ್ತೋರ್ವ ತಾರೆ ಸುನೀಲ್ ಶೆಟ್ಟಿ ಅವರಿಗೆ ಟ್ವಿಟರ್‌ನಲ್ಲಿ ತುಳುವಿನಲ್ಲೇ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ಪುಟ್ಟುದಿನ ದಿನದ ಶುಭಾಶಯೊಲು ಊರುದಾರೆ.. (ಹುಟ್ಟಿದ ದಿನದ ಶುಭಾಶಯಗಳು ಊರಿನವರೇ) ಎಂದು ತುಳುವಿನಲ್ಲಿ ಆರಂಭಿಸಿ ಶುಭಕೋರಿರುವ ಸುನೀಲ್ ಶೆಟ್ಟಿ ಟ್ವೀಟ್‌ಗೆ ಶಿಲ್ಪಾ ಶೆಟ್ಟಿ ಕೂಡ ತುಳುವಿನಲ್ಲೇ ಪ್ರತಿಕ್ರಿಯಿಸಿದ್ದು, ಅವ್‌, ಭಾರಿ ಥ್ಯಾಂಕ್ಸ್ (ತುಂಬಾ ಧನ್ಯವಾದ) ಎಂದು ಟ್ವೀಟ್ ಮಾಡಿದ್ದಾರೆ.   

short by Pawan / more at Vijayakarnataka

Comments