Skip to main content


ಪೊಗರು ಧ್ರುವಾಗೆ ಕಿಸ್ ಶ್ರೀ ಲೀಲಾ ನಾಯಕಿ..?

ನಂದಕಿಶೋರ್ ನಿರ್ದೇಶನದಲ್ಲಿ ಧ್ರುವಾ ಸರ್ಜಾ ಅಭಿನಯಿಸುತ್ತಿರುವ 'ಪೊಗರು' ಸಿನಿಮಾ ಶೂಟಿಂಗ್ ಈಗಾಗಲೇ ಆರಂಭವಾಗಿದೆ. ಈ ಸಿನಿಮಾದಲ್ಲಿ ಧ್ರುವಾ ಚಿಕ್ಕ ಹುಡುಗನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ ಎಂಬುದು ಎಲ್ಲರಿಗೂ ಗೊತ್ತು.

ಚಿತ್ರಕ್ಕೆ ನಾಯಕಿ ಯಾರು ಎಂಬುದು ಇನ್ನೂ ತಿಳಿದುಬಂದಿಲ್ಲ. ಮೂಲಗಳ ಪ್ರಕಾರ ಶ್ರೀ ಲೀಲಾ ಅವರನ್ನು ಚಿತ್ರಕ್ಕೆ ನಾಯಕಿಯಾಗಿ ಆಯ್ಕೆ ಮಾಡಲಾಗಿದೆ ಎನ್ನಲಾಗಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಎ.ಪಿ. ಅರ್ಜುನ್ ನಿರ್ದೇಶನದ 'ಕಿಸ್‌‌‌' ಚಿತ್ರದಲ್ಲಿ ವಿರಾಟ್ ಜೊತೆ ನಟಿಸುವ ಮೂಲಕ ಶ್ರೀ ಲೀಲಾ ಸ್ಯಾಂಡಲ್‌‌ವುಡ್‌ಗೆ ಕಾಲಿಟ್ಟಿದ್ದರು. ಇನ್ನು ಶ್ರೀ ಮುರಳಿ ಅಭಿನಯದ ಹೆಸರಿಡದ ಹೊಸ ಸಿನಿಮಾಗೆ ಕೂಡಾ ಶ್ರೀ ಲೀಲಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎನ್ನಲಾಗಿದೆ.   

short by Pawan / more at Eenadu India

Comments