Skip to main content


ಫಿಟ್ನೆಸ್​ ಕಾಪಾಡಲು ಏನೆಲ್ಲಾ ಮಾಡ್ತಾರೆ ವಿರಾಟ್ ಕೊಹ್ಲಿ? ಗುಟ್ಟು ಬಿಚ್ಚಿಟ್ಟ ನಾಯಕ!

ಪ್ರತಿಯೊಬ್ಬ ಭಾರತೀಯನೂ ವಿರಾಟ್​ ಕೊಹ್ಲಿಯಿಂದ ಫಿಟ್ನೆಸ್​ನ ಪ್ರೇರಣೆ ಪಡೆಯುತ್ತಾರೆ. ಅವರು ಪ್ರತಿದಿನ ತಮ್ಮ ಹೆಚ್ಚಿನ ಸಮಯವನ್ನು ಜಿಮ್​ ಮಾಡುವುದರಲ್ಲೇ ಕಳೆಯುತ್ತಾರೆ. ಇಲ್ಲಿ ಅವರು ಕಾರ್ಡಿಯೋ ಟ್ರೇನಿಂಗ್ ಮಾಡುತ್ತಾರೆ. ಇತ್ತೀಚೆಗಷ್ಟೇ ಪತ್ರಿಕೆಯೊಂದು ಕೊಹ್ಲಿಯ ಸಂದರ್ಶನ ನಡೆಸಿದ್ದು, ಈ ಸಂದರ್ಭದಲ್ಲಿ ಟೀಂ ಇಂಡಿಯಾದ ನಾಯಕ ಹಲವು ಕುತೂಹಲಕಾರಿ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ. 

ವಿರಾಟ್ ಬಳಿ ಫಿಟ್ನೆಸ್​ಗೆ ನಿಮಗೆ ಪ್ರೇರಣೆ ಯಾರಿಂದ ಸಿಗುತ್ತದೆ ಎಂದು ಪ್ರಶ್ನಿಸಿದಾಗ ನಿಜ ಹೇಳಬೇಕೆಂದರೆ ನನಗೆ ಯಾರಿಂದಲೂ ಪ್ರೇರಣೆ ಸಿಕ್ಕಿಲ್ಲ. ನನ್ನಷ್ಟಕ್ಕೇ ನಾನಿದನ್ನು ಅರ್ಥೈಸಿಕೊಂಡಿದ್ದೇನೆ. ಹೀಗಾಗಿ ನಾನು ಯಾರನ್ನೂ ಫಾಲೋ ಮಾಡುವುದಿಲ್ಲ ಎಂದಿದ್ದಾರೆ.

ನೀವು ಹೆಚ್ಚೆಂದರೆ ಎಷ್ಟು ದೂರದ ಓಟ ಓಡಿದ್ದೀರಿ? ಎಂಬ ಪ್ರಶ್ನೆಗೆ ಉತ್ತರಿಸಿದ ಕೊಹ್ಲಿ ಪ್ರತಿ ಗಂಟೆಗೆ 14 ಕಿ. ಮೀಟರ್​ ವೇಗದಲ್ಲಿ 20 ನಿಮಿಷ ಓಡಿದ್ದೇನೆ ಎಂದು ಉತ್ತರಿಸಿದ್ದಾರೆ.

ಅತಿ ಹೆಚ್ಚೆಂದರೆ ಎಷ್ಟು ಭಾರ ಹೊತ್ತಿದ್ದೀರಿ? ಎಂಬ ಪ್ರಶ್ನೆಗೆ ಉತ್ತರಿಸಿದ ಕ್ಯಾಪ್ಟನ್ ಕೊಹ್ಲಿ 145 ಕಿಲೋ ಡೆಡ್​ ಲಿಫ್ಟ್​ ಅತ್ಯಂತ ಹೆಚ್ಚು ಭಾರವಾಗಿತ್ತು ಎಂದಿದ್ದಾರೆ.    

short by Pawan / more at Kannada News 18

Comments