Skip to main content


ಯುವಿ ಮನೆಯಲ್ಲಿ ಪವರ್ ಕಟ್, ಭಜ್ಜಿ ಟ್ರೋಲ್!

ವಿದ್ಯುತ್ ಸಮಸ್ಯೆ ಎಲ್ಲಡೆ ಸರ್ವೇ ಸಾಮಾನ್ಯ. ವಿದ್ಯುತ್ ಇಲ್ಲದೆ ಇರುವಾಗ ಕಚೇರಿಗೆ ಕರೆ ಮಾಡಿ ಜನರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸುತ್ತಾರೆ. ಭಾರತದ ಹಿರಿಯ ಕ್ರಿಕೆಟಿಗ ಯುವರಾಜ್ ಸಿಂಗ್ ಅವರಿಗೂ ಇಂತಹದೊಂದು ಸಮಸ್ಯೆ ತಲೆದೋರಿತ್ತು. ಇದರಿಂದ ಬೇಸತ್ತು ಹೋದ ಯುವಿ, ಕೊನೆಗೂ ತಮ್ಮ ಸಮಸ್ಯೆಯನ್ನು ಟ್ವಿಟರ್‌ನಲ್ಲಿ ತೋಡಿಕೊಂಡಿದ್ದರು. "ಬಾಂದ್ರಾ ಪ್ರದೇಶದಲ್ಲಿ ಕಳೆದ ಒಂದು ವರೆ ತಾಸಿನಿಂದಲೂ ವಿದ್ಯುತ್ ಇಲ್ಲ, ಸರಿಪಡಿಸಬಹುದೇ'' ಎಂಬುದನ್ನು ಯುವಿ ಮನವಿ ಮಾಡಿಕೊಂಡಿದ್ದರು. ಇದಕ್ಕೆ ಪ್ರತಿಯಾಗಿ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ತಮ್ಮ ಗೆಳೆಯನ ಕಾಲೆಳೆದಿದ್ದಾರೆ. "ವಿದ್ಯುತ್ ಬಿಲ್ ಸಮಯಕ್ಕೆ ಸರಿಯಾಗಿ ಕಟ್ಟು" ಎಂದು ಛೇಡಿಸಿದ್ದಾರೆ.     

short by Pawan / more at Vijayakarnataka

Comments