Skip to main content


ಕೊನೆಗೂ ಗಾಸಿಪ್​ಗೆ ಬ್ರೇಕ್​ : ಬಾಲಿವುಡ್​ ಪಿಗ್ಗಿ ಇನ್​ ಲವ್​!

ಬಾಲಿವುಡ್​ನಿಂದ ಹಾಲಿವುಡ್​ಗೆ ಹಾರಿದ್ದ ಪ್ರಿಯಾಂಕ ಚೋಪ್ರಾ ಒಂದಿಲ್ಲೊಂದು ಗಾಸಿಪ್​ಗೆ ಒಳಗಾಗುತ್ತಲೇ ಇದ್ದಾರೆ. ಸಾಕಷ್ಟು ಬಾರಿ ಸುದ್ದಿಯಾಗಿದ್ದ ಪ್ರಿಯಾಂಕಗೆ ಇದೀಗ ಮತ್ತೊಂದು ಪ್ರೇಮ ​ ಪ್ರಕರಣ ಗಾಸಿಪ್​ಗೆ ಸುತ್ತಿ ಹಾಕಿಕೊಂಡಿದೆ. ಪಿಗ್ಗಿ, ಹಾಲಿವುಡ್​ ಗೆ ಹೋದ ಮೇಲೆ ಸಾಕಷ್ಟು ಸಮಯ ಗಾಯಕ ನಿಕ್​ ಜೋನಾಸ್​ ಜೊತೆ ಓಡಾಡುತ್ತಿದ್ದುದು ಸುದ್ದಿ ಹೆಚ್ಚು ಸದ್ದು ಮಾಡಿತ್ತು. ಇದೀಗ ಅವರಿಬ್ಬರ ಸಂಬಂಧಕ್ಕೆ ಅದಕ್ಕೆ ಅಧಿಕೃತ ಮುದ್ರೆ ಸಿಕ್ಕಂತಿದೆ. ಈ ಹಿಂದೆ ಇಬ್ಬರು ಹೊರಗಡೆ ಸುತ್ತಾಡುವುದನ್ನು ನೋಡಿದ ಜನ ಬಾಲಿವುಡ್​ ಪಿಗ್ಗಿ ಹಾಲಿವುಡ್​ ಗಾಯಕನ ಕೈ ಹಿಡಿಯುತ್ತಾಳೆ ಎಂಬ ಸುದ್ದಿ ಸಕತ್​​ ವೈರಲ್​ ಆಗಿದೆ. ಮೊದ - ಮೊದಲು ಕದ್ದುಮುಚ್ಚಿ ಮಾತಾಡುತ್ತಿದ್ದ , ಓಡಾಡುತ್ತಿದ್ದ ಜೋಡಿ ಇದೀಗ ಎಲ್ಲೆಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಇವರಿಬ್ಬರ ಸಬಂಧದ ಬಗ್ಗೆ ಪ್ರಿಯಾಂಕ ಆಗಲೀ ನಿಕ್​ ಜೋನಾಸ್​ ಅವರಾಗಲೀ ಯಾವುದೇ ರೀತಿಯ ವಿಚಾರ ಎತ್ತಿರಲಿಲ್ಲ. ಇದೀಗ ನಿಕ್​ ಜೋನಾಸ್​ ಅವರ ಆಪ್ತರ ಮದುವೆಯಲ್ಲಿ ಪ್ರಿಯಾಂಕ್​ ನಿಕ್​ ಅವರ ಕೈ ಹಿಡಿದು ಆದರ್ಶ ಜೋಡಿಯಂತೆ ಓಡಾಡುತ್ತಿದ್ದುದ್ದನ್ನು ನೋಡಿ ಇವರದ್ದು ಬರೀ ಫ್ರೆಂಡ್​ಶಿಪ್​ ಅಷ್ಟೇ ಅಲ್ಲ ಪ್ರೇಮವೂ ಇದೆ ಎಂಬುದನ್ನು ಕನ್ಫರ್ಮ್​ ಮಾಡಿಕೊಂಡಿದ್ದಾರೆ. ಇನ್ನು ನಿಕ್​ ಮನೆಯವರ ಜೊತೆ ಪಿಗ್ಗಿ ಮಾತು-ಕತೆ ಮಾಡಿಕೊಂಡಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.     

short by Pawan / more at Bp9news

Comments