Skip to main content


ಬೆಟ್ಟಿಂಗ್ ನಂತ್ರ ಇನ್ನೊಂದು ಸಂಕಷ್ಟದಲ್ಲಿ ಶಿಲ್ಪಾ ಶೆಟ್ಟಿ ಪತಿ

ಉದ್ಯಮಿ ರಾಜ್ ಕುಂದ್ರಾ ಮತ್ತೊಂದು ಪ್ರಕರಣದಲ್ಲಿ ತಗಲಿ ಹಾಕಿಕೊಂಡಿದ್ದಾರೆ. ಬಾಲಿವುಡ್ ನಟಿ ಶಿಲ್ಪಾಶೆಟ್ಟಿ ಪತಿ ರಾಜ್ ಕುಂದ್ರಾರಿಗೆ ಇಡಿ ಸಮನ್ಸ್ ಜಾರಿ ಮಾಡಿದೆ. ಐಪಿಎಲ್ ಬೆಟ್ಟಿಂಗ್ ಪ್ರಕರಣದ ನಂತ್ರ ಬಿಟ್ ಕಾಯಿನ್ ಹಗರಣದ ಬಗ್ಗೆ ರಾಜ್ ಕುಂದ್ರಾ ವಿಚಾರಣೆ ನಡೆಯಲಿದೆ.

ಮೂಲಗಳ ಪ್ರಕಾರ ಈಗಾಗಲೇ ರಾಜ್ ಕುಂದ್ರಾ ಮುಂಬೈನಲ್ಲಿರುವ ಇಡಿ ಕಚೇರಿಗೆ ಆಗಮಿಸಿದ್ದಾರೆ ಎನ್ನಲಾಗಿದೆ. ಇತ್ತೀಚಿಗೆ ತೆರಿಗೆ ಇಲಾಖೆ ಆನ್ಲೈನ್ ನಲ್ಲಿ ಬಿಟ್ ಕಾಯಿನ್ ಬಳಕೆದಾರರಿಗೆ ನೊಟೀಸ್ ಜಾರಿ ಮಾಡಿತ್ತು. ಬಿಟ್ ಕಾಯಿನ್ ವ್ಯವಹಾರದಲ್ಲಿ ಪ್ರತಿದಿನ ಒಂದು ಕೋಟಿಗೂ ಹೆಚ್ಚು ಹಣ ತೊಡಗಿಸುತ್ತಿರುವವರಿಗೆ ಈ ನೊಟೀಸ್ ಜಾರಿಯಾಗಿತ್ತು. ನಂತ್ರ ಹೆಸರನ್ನು ಇಡಿಗೆ ನೀಡಿತ್ತು.

ಮನಿ ಲಾಂಡರಿಂಗ್ ನಲ್ಲಿ ಶಿಲ್ಪಾ ಶೆಟ್ಟಿ ಪತಿ ಜೊತೆ ಇನ್ನೂ ಅನೇಕ ಬಾಲಿವುಡ್ ಕಲಾವಿದರಿದ್ದಾರೆ ಎನ್ನಲಾಗ್ತಿದೆ. ಕುಂದ್ರಾ ವಿಚಾರಣೆ ನಂತ್ರ ಬಿಟ್ ಕಾಯಿನ್ ಬಗ್ಗೆ ಮಾಹಿತಿ ಸಿಗಲಿದೆ.    

short by Pawan / more at Kannadadunia

Comments