Skip to main content


ನಟಸಾರ್ವಭೌಮನಿಗೆ ನಾಯಕಿ ಬೇಕಂತೆ! – ರಚಿತಾ ಬೇಡ ಅಂದ ಅಭಿಮಾನಿಗಳ ಮಾತಿಗೆ ಬೆಲೆ!

ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ ಮುಂದಿನ ಚಿತ್ರ ನಟಸಾರ್ವಭೌಮನಿಗೀಗ ನಾಯಕಿಯದ್ದೇ ತಲೆ ನೋವಾಗಿ ಬಿಟ್ಟಿದೆ. ನಿರ್ದೇಶಕ ಪವನ್ ಒಡೆಯರ್ ಅದೇನೇ ಸರ್ಕಸ್ಸು ನಡೆಸಿದರೂ ನಾಯಕಿಯ ವಿಚಾರದಲ್ಲಿ ಮಾತ್ರ ಯಾವುದೂ ಸುಲಭಕ್ಕೆ ಇತ್ಯರ್ಥವಾಗುತ್ತಿಲ್ಲ.ರಚಿತಾ ರಾಮ್ ಅವರೇ ತಮ್ಮ ಚಿತ್ರದ ನಾಯಕಿ ಎಂದೂ ಹೇಳಿದ್ದರು. ಆದರೆ ಅದರ ಬೆನ್ನಿಗೇ ನಡೆದದ್ದು ತೀರಾ ಅಪರೂಪದ ಆಕಸ್ಮಿಕ ಬೆಳವಣಿಗೆ!

ಯಾವಾಗ ರಚಿತಾ ರಾಮ್ ನಟಸಾರ್ವಭೌಮನಿಗೆ ನಾಯಕಿ ಅಂತ ಹೇಳಲಾಯಿತೋ ಆ ಕ್ಷಣವೇ ಅದೇಕೋ ಪುನೀತ್ ರಾಜ್‍ಕುಮಾರ್ ಅಭಿಮಾನಿಗಳು ಅಸಹನೆ ವ್ಯಕ್ತಪಡಿಸಿದ್ದರು. ಆದರೆ ಈ ಕ್ಷಣಕ್ಕೂ ಕೂಡಾ ರಚಿತಾ ವಿರುದ್ಧ ಪುನೀತ್ ಅಭಿಮಾನಿಗಳು ಯಾಕೆ ಆ ಪರಿ ಕೋಪಗೊಂಡಿದ್ದಾರೆಂಬ ವಿಚಾರ ಜಾಹೀರಾಗಿಲ್ಲ. ಅದೇನೇ ಇದ್ದರೂ ಅಭಿಮಾನಿಗಳ ಒಗ್ಗಟ್ಟಿನ ಆಶಯಕ್ಕೆ ಬೆಲೆ ಕೊಡದಿದ್ದರೆ ಹೇಗೆ? ಇದೇ ಸಂದಿಗ್ಧದಲ್ಲಿ ಇದೀಗ ಪವನ್ ಒಡೆಯರ್ ನಾಯಕಿಗಾಗಿ ಗಂಭೀರವಾಗಿಯೇ ಹುಡುಕಾಟ ನಡೆಸಿದ್ದಾರೆಂಬ ಸುದ್ದಿ ಇದೆ.   

short by Pawan / more at Public Tv

Comments