Skip to main content


ಮಾಧವನ್​ಗೆ ಮತ್ತೊಮ್ಮೆ ಜೋಡಿಯಾದ ಶ್ರದ್ಧಾ

ತಮಿಳಿನ ‘ವಿಕ್ರಂ ವೇದ’ ಚಿತ್ರದಲ್ಲಿ ಮುಖ್ಯಭೂಮಿಕೆ ನಿಭಾಯಿಸಿದ್ದ ವಿಜಯ್ ಸೇತುಪತಿ, ಮಾಧವನ್ ಮತ್ತು ಶ್ರದ್ಧಾ ಶ್ರೀನಾಥ್ ಬಗ್ಗೆ ಪ್ರೇಕ್ಷಕ ವರ್ಗದಿಂದ ಮೆಚ್ಚುಗೆಯ ಮಹಾಪೂರವೇ ಹರಿದುಬಂದಿತ್ತು. ಅದರಲ್ಲೂ ಮಾಧವನ್-ಶ್ರದ್ಧಾ ಜೋಡಿಗೆ ಫುಲ್ ಮಾರ್ಕ್ಸ್ ಸಿಕ್ಕಿತ್ತು. ಇದೀಗ ಅದೇ ಜೋಡಿ ‘ಮಾರಾ’ ಚಿತ್ರದ ಮೂಲಕ ಮತ್ತೊಮ್ಮೆ ಮ್ಯಾಜಿಕ್ ಮಾಡಲು ಸಜ್ಜಾಗಿದೆ.

ಹೌದು, ‘ವಿಕ್ರಂವೇದ’ದಂತಹ ಕ್ರೖೆಂ ಥ್ರಿಲ್ಲರ್​ನಲ್ಲಿ ಜತೆಯಾಗಿದ್ದ ಈ ಇಬ್ಬರು ಕಲಾವಿದರು, ಇದೀಗ ರೊಮ್ಯಾಂಟಿಕ್ ಸಿನಿಮಾ ಮೂಲಕ ಒಂದಾಗುತ್ತಿದ್ದಾರೆ. ‘ಕಲ್ಕಿ’ ಕಿರುಚಿತ್ರದ ಮೂಲಕವೇ ತಮಿಳು ಇಂಡಸ್ಟ್ರಿಯಲ್ಲಿ ಸಂಚಲನ ಸೃಷ್ಟಿಸಿದ್ದ ದಿಲೀಪ್ ಕುಮಾರ್ ಚೊಚ್ಚಲ ಸಿನಿಮಾ ನಿರ್ದೇಶನಕ್ಕಿಳಿದಿದ್ದಾರೆ. ಮೊದಲ ಚಿತ್ರದಲ್ಲಿಯೇ ದೊಡ್ಡ ತಾರಾಬಳಗವನ್ನೇ ದಿಲೀಪ್ ಆಯ್ದುಕೊಂಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಗಂಭೀರ ಪಾತ್ರಗಳ ಮೂಲಕವೇ ಗುರುತಿಸಿಕೊಂಡಿದ್ದ ಮಾಧವನ್, ಈ ಸಿನಿಮಾ ಮೂಲಕ ಹಳೇ ಖದರ್​ಗೆ ಮರಳಲಿದ್ದಾರಂತೆ.   

short by Pawan / more at Vijayavani

Comments