Skip to main content


ನಿರಂಜನ್ ಬಿಚ್ಚಿಟ್ಟ ಕಾಸ್ಟಿಂಗ್ ಕೌಚ್ ನ ಭಯಾನಕ ಸತ್ಯ.

ಕಾಸ್ಟಿಂಗ್ ಕೌಚ್ ಬಗ್ಗೆ ನಟ ನಿರಂಜನ್ ದೇಶಪಾಂಡೆ ಮಾತನಾಡಿದ್ದಾರೆ. ಸಿನಿಮಾ ಇಂಡಸ್ಟ್ರಿಗೆ ಬರೊದಕ್ಕೂ ಮೊದಲು ನಿರಂಜನ್ ಜಾಹೀರಾತುಗಳಲ್ಲಿ ನಟಿಸ್ತಾ ಇದ್ರು, ಇದಕ್ಕಾಗಿ ಮುಂಬೈನಲ್ಲಿ ನೆಲೆಸಿದ್ರು. ಆಯಡ್ ಸಿನಿಮಾಗಳಲ್ಲಿ ನಟಿಸೋ ಸಲುವಾಗಿ ಸಾಕಷ್ಟು ಆಯಡ್ ಮೂವಿ ಮೇಕರ್ಸ್ನ ಭೇಟಿ ಮಾಡ್ತಾ ಇದ್ರು ನಿರಂಜನ್ ದೇಶಪಾಂಡೆ. ಈ ಸಮಯದಲ್ಲಿ ಜಾಹಿರಾತು ಸಿನಿಮಾ ನಿರ್ದೇಶಕರೊಬ್ಬರು ನಿರಂಜನ್ಗೂ ಕೂಡ ನಟಿಸೋಕೆ ಅವಕಾಶ ಬೇಕು ಅಂದ್ರೆ ಸ್ವಲ್ಪ ಅಡ್ಜೆಸ್ಟ್ ಮಾಡಿಕೊಳ್ಳಬೇಕಾಗುತ್ತೆ ಅಂದಿದ್ರಂತೆ. ಅಡ್ಜಸ್ಟ್ ಅಂದ್ರೆ ಏನೂ ಅಂತಲೂ ಅವ್ರೇ ವಿವರಿಸಿದ್ರಂತೆ. ಇಂಥದ್ದೊಂದು ಅನುಭವ ನನಗಾಗಿತ್ತು ಅಂದ್ರೆ ಯಾರೂ ನಂಬಲ್ಲ. ನಂಬಿದ್ರೂ ತಮಾಷೆ ಮಾಡ್ತಾರೆ ಅನ್ನೋ ಕಾರಣಕ್ಕೆ ಹೇಳಿಕೊಂಡಿರಲಿಲ್ಲ ಅಂತಾರೆ ನಿರಂಜನ್ ದೇಶಪಾಂಡೆ.   

short by Pawan / more at Balkani News

Comments