Skip to main content


"ಕಿನಾರೆ" ಚಿತ್ರದ ನಾಲ್ಕನೇ ಹಾಡನ್ನು ಬಿಡುಗಡೆಗೆ ಮಾಡಲಿದ್ದಾರೆ ಕನ್ನಡದ 'ಈ' ಟಾಪ್ ನಟ

ಅಲ್ಲಾಡ್ಸ್ ಅಲ್ಲಾಡ್ಸ್ ಅಲ್ಲಾಡ್ಸು, ಹೊಡಿ ಒಂಬತ್ತ್ ಆದ ನಂತರ ಮತೊಮ್ಮೆ ಯೊಗ್ರಾಜ್ ಭಟ್ ಹಾಗು ವಿಜಯ್ ಪ್ರಕಾಶ್ ಅವರು ಪುನಹ ಒಂದಾಗಿ ಮತ್ತೊಂದು ಸೂಪರ್ ಹಿಟ್ ಹಾಡನ್ನು ನಮಗೆ ಕೊಡಲು ಮುಂದಾಗಿದ್ದಾರೆ. 
ಈ ಬಾರಿ ಅವರು ಒಂದಾಗಿದ್ದು "ಕಿನಾರೆ" ಚಿತ್ರದ ಒಂದು ಹಾಡಿಗೋಸ್ಕರ. ಚಿತ್ರದ 4ನನೇ ಹಾಡು ಇದಾಗಿದ್ದು, ಇದನ್ನು ಜೂನ್ 29ರಂದು ಸಂಜೆ 4:30 ಗೆ ಬಿಡುಗಡೆ ಮಾಡಲಾಗುವುದು ಎಂದು ಚಿತ್ರತಂಡ ತಿಳಿಸಿದೆ. ಈ ಹಾಡನ್ನು ಡಾಲಿ ಧನಂಜಯ ಅವರು ಬಿಡುಗಡೆ ಮಾಡುತ್ತಿರುವುದು ವಿಶೇಷ.

ಈ ಹಾಡಿನ ಸಾಹಿತ್ಯ ಯೋಗ್ರಾಜ್ ಭಟ್ಟರು ಬರೆದಿದ್ದು, ವಿಜಯ್ ಪ್ರಕಾಶ್ ಅವರು ಈ ಹಾಡಿಗೆ ಧನಿಯಾಗಿದ್ದಾರೆ. ಸುರೇಂದ್ರನಾಥ್ ಅವರ ಸಂಗೀತ ನಿರ್ದೇಶನ ಚಿತ್ರಕ್ಕಿದೆ.

ದೇವ್ರಾಜ್ ಪೂಜಾರಿಯವರು ನಿರ್ದೇಶಿಸಿರುವ "ಕಿನಾರೆ ಚಿತ್ರದಲ್ಲಿ ಸತೀಶ್ ನಾಯಕ ನಟರಾಗಿದ್ದು, ಗೌತಮಿ ನಾಯಕ ನಟಿಯಾಗಿ ನಟಿಸಿದ್ದಾರೆ. ಇನ್ನು ಸಿಹಿಕಹಿ ಚಂದ್ರು ರವರು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳುತ್ತಾರೆ ಎಂಬ ಸುದ್ದಿ ಚಿತ್ರತಂಡದಿಂದ ಕೇಳಿ ಬಂದಿದೆ. ಅಂದಹಾಗೆ ಚಂದನ್ ಶೆಟ್ಟಿ ಈ ಚಿತ್ರಕ್ಕಾಗಿ ಹಾಡಿರುವ ಒಂದು ರ್ಯಾಪ್ ಸಾಂಗ್ ಜಾಲ ತಾಣಗಳ್ಲಲಿ ತುಂಬಾ ಸದ್ದು ಮಾಡುತ್ತಿದೆ.

* ಶರತ್ ಬೈಲೋಳಿ