Skip to main content


ಸಂಕಷ್ಟದಲ್ಲಿ ನಟ ಸತೀಶ್‌ ಚಿತ್ರ ಅಯೋಗ್ಯ!

ಹೌದು, ಚಿತ್ರದ ಅಯೋಗ್ಯ ಟೈಟಲ್‌ ಈ ಸಮಸ್ಯೆ ತಂದಿಟ್ಟಿದೆ. ನಿರ್ದೇಶಕ ಮಹೇಶ್‌ ಫಿಲ್ಮ ಚೇಂಬರ್‌ನಲ್ಲಿ 'ಅಯೋಗ್ಯ' ಎನ್ನುವ ಟೈಟಲ್‌ ನೋಂದಣಿ ಮಾಡಿಸಿದ್ದರು. ಆದರೆ, ಪ್ರಚಾರದ ವೇಳೆ 'ಅಯೋಗ್ಯ ಗ್ರಾಮ ಪಂಚಾಯತ್‌ ಸದಸ್ಯ' ಎಂದು ಬಳಸಿಕೊಂಡಿದ್ದಾರೆ. ಇದಕ್ಕೆ ವಿರೋಧ ವ್ಯಕ್ತಪಡಿಸಿರುವ ಕನ್ನಡ ಕ್ರಾಂತಿ ದಳ ಸಂಘಟನೆ ಟೈಟಲ್ ಬದಲಿಸುವಂತೆ ಅಗ್ರಹಿಸಿದೆ. ಜನಪ್ರತಿನಿಧಿಯನ್ನು ಅಯೋಗ್ಯ ಅಂದಿರೋದು ಸಂಘಟನೆಯವರ ಆಕ್ರೋಶಕ್ಕೆ ಕಾರಣವಾಗಿದೆ.     

short by Pawan / more at Eenadu India

Comments