Skip to main content


ಸಿಎಂ ಕುಮಾರಸ್ವಾಮಿ ಭೇಟಿ ಮಾಡಿದ ಕಮಲ್‌ ಹಾಸನ್‌

ತಮಿಳುನಾಡು ಖ್ಯಾತ ನಟ ಕಮಲಾ ಹಾಸನ್‌ ಸೋಮವಾರ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಯವರನ್ನು ಗೃಹ ಕಚೇರಿ ಕೃಷ್ಣಾದಲ್ಲಿ ಭೇಟಿ ಮಾಡಿ ಕುರುವೈ ಬೆಳೆಗೆ ಕಾವೇರಿ ನೀರು ಬಿಡುವಂತೆ ಮನವಿ ಮಾಡಿದರು. ತಮಿಳುನಾಡಿನಲ್ಲಿ ಬೆಳೆದು ನಿಂತಿರುವ ಕುರುವೈ ಬೆಳೆಗೆ ನೀರಿನ ಅವಶ್ಯಕತೆಯಿದೆ. ಅಲ್ಲಿನ ರೈತರ ಹಿತದೃಷ್ಟಿಯಿಂದ ಮಾನವೀಯತೆ ನೆಲೆಗಟ್ಟಿನಲ್ಲಿ ನೀರು ಬಿಡುಗಡೆ ಸಾಧ್ಯವೇ ಪರಿಶೀಲಿಸಿ ಎಂದು ಕೋರಿದರು. ನಂತರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಚ್‌.ಡಿ.ಕುಮಾರಸ್ವಾಮಿ, ಕಾವೇರಿ ವಿಚಾರದಲ್ಲಿ ನಮ್ಮ ರಾಜ್ಯದ ರೈತರು ಹಾಗೂ ತಮಿಳುನಾಡಿನ ರೈತರು ಇಬ್ಬರ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ಚರ್ಚಿಸಿದ್ದೇವೆ. ಸಮಸ್ಯೆ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕು ಹಾಗೂ ಎರಡೂ ರಾಜ್ಯಗಳ ನಡುವೆ ಸೌಹಾರ್ದ ಸಂಬಂಧ ಇರಬೇಕು. ಕಾವೇರಿ ಸಮಸ್ಯೆ ಇಂದು ಮೊನ್ನೆಯದಲ್ಲ. ಆದರೆ, ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಲು ತಮಿಳುನಾಡು ಮುಕ್ತ ಮನಸ್ಸು ಹೊಂದಿದರೆ ಅದಕ್ಕೆ ನಾವೂ ಸಿದ್ಧ. ನಮಗೆ ನಮ್ಮ ರೈತರ ಹಿತಾಸಕ್ತಿಯೂ ಮುಖ್ಯವೇ ಎಂದು ತಿಳಿಸಿದರು. ಕಾವೇರಿ ವಿಚಾರದಲ್ಲಿ ತಮಿಳುನಾಡು ಹಾಗೂ ಕರ್ನಾಟಕದ ನಡುವೆ ನೀವು ಸಂಪರ್ಕ ಸೇತುವೆಯಾ ಎಂದು ಕಮಲ್ ಬಳಿ ಪ್ರಶ್ನಿಸಿದಾಗ, ನಾನು ಸಂಪರ್ಕ ಸೇತುವೆಯಾದರೂ ಸರಿ, ಅಳಿಲಾದರೂ ಸರಿ ಕೊನೆಗೆ ಚಪ್ಪಲಿಯಾದರೂ ಸರಿ, ಜನಸೇವಕ ಅಷ್ಟೆ ಎಂದರು.

short by Shraman / more at Udayavani

Comments