Skip to main content


ಮುಖ್ಯಮಂತ್ರಿಯಾಗಲು ನಿರ್ಧಾರ ಮಾಡಿದ ಕಿಚ್ಚ ಸುದೀಪ್

ನಟ ಸುದೀಪ್ ಅವರು ಮುಖ್ಯಮಂತ್ರಿಯಾದರೆ ಈಗಾಗಲೇ ಮುಖ್ಯಮಂತ್ರಿ ಪಟ್ಟ ಅಲಂಕರಿಸಿರುವ ಕುಮಾರಸ್ವಾಮಿ ಅವರು ಏನಾದರೂ ಎಂದು ಚಿಂತಿಸಬೇಡಿ. ಯಾಕೆಂದರೆ ಸುದೀಪ್ ಅವರು ಮುಖ್ಯಮಂತ್ರಿಯಾಗಲಿರುವುದು ಸಿನಿಮಾದಲ್ಲಿ. ಪ್ರಿನ್ಸ್ ಮಹೇಶ್ ಬಾಬು ಅಭಿನಯದ ಸೂಪರ್ ಹಿಟ್ `ಭರತ್ ಆನೇ ನೇನು' ಸಿನಿಮಾ ಕನ್ನಡಕ್ಕೆ ರಿಮೇಕ್ ಆಗೋಕೆ ರೆಡಿಯಾಗಿದೆ. ‘ಭರತ್ ಆನೇ ನೇನು' ಸಿನಿಮಾದಲ್ಲಿ ಮಹೇಶ್‍ಬಾಬು ಅವರು ಸಿಎಂ ಪಟ್ಟವನ್ನು ಅಲಂಕರಿಸಿ ಸಮಾಜದ ಇಡೀ ವ್ಯವಸ್ಥೆಯನ್ನ ಬದಲಾವಣೆ ಮಾಡುವಲ್ಲಿ ಯಶಸ್ವಿಯಾಗುತ್ತಾರೆ. ಈ ಪಾತ್ರವನ್ನುಕನ್ನಡದಲ್ಲಿ ಸುದೀಪ್ ಅವರು ಮಾಡಲಿದ್ದಾರಂತೆ. ಇದಕ್ಕೆ ಹಲವು ನಿರ್ಮಾಪಕರು ಮುಂದಾಗಿದ್ದು ‘ಭರತ್ ಅನ್ನೋ ನಾನು' ಟೈಟಲ್ ಇಡೋಕೆ ಕೂಡ ಅವರು ನಿರ್ಧರಿಸಿದ್ದಾರಂತೆ.  

short by Pawan!

Comments