Skip to main content


ಕಿಚ್ಚನ ನಾಲ್ಕು ಸಿನಿಮಾಗಳಲ್ಲಿ ಮೊದಲು ರಿಲೀಸ್ ಆಗೋ ಸಿನಿಮಾ ಯಾವುದು ಗೊತ್ತಾ..?

ಕಿಚ್ಚ ಸುದೀಪ್‌ ಬ್ಯಾಕ್‌ ಟು ಬ್ಯಾಕ್‌ ಸಿನಿಮಾಗಳನ್ನ ಮಾಡ್ತಿದ್ದಾರೆ. ಈ ಪೈಕಿ ಈಗಾಗ್ಲೇ 'ದಿ ವಿಲನ್‌' ಚಿತ್ರದ ಕೆಲಸಗಳನ್ನ ಕಂಪ್ಲೀಟ್‌ ಆಗಿ ಮುಗಿಸಿಕೊಟ್ಟಿದ್ದಾರೆ. ಈ ನಡುವೆ 'ಅಂಬಿ ನಿಂಗ್‌ ವಯಸ್ಸಾಯ್ತೋ' ಚಿತ್ರದ ಶೂಟಿಂಗ್‌ ನ ಮುಗಿಸಿದ್ದಾರೆ. ಜೊತೆಗೆ ಪೈಲ್ವಾನ್‌ ಚಿತ್ರದ ಒಂದು ಹಂತದ ಚಿತ್ರೀಕರಣವನ್ನು ಮುಗಿಸಿದ್ದಾರೆ. ಇದೀಗ ಕೋಟಿಗೊಬ್ಬ 3 ಚಿತ್ರದ ಚಿತ್ರೀಕರಣ ಶುರುಮಾಡ್ತಿದ್ದಾರೆ. ಸೋ ಒಂದರ ಹಿಂದೆ ಒಂದರಂತೆ, ಸುದೀಪ್‌ ನಾಲ್ಕು ಸಿನಿಮಾಗಳನ್ನ ಮಾಡ್ತಿದ್ದಾರೆ.

ಸುದೀಪ್‌ ಲಿಸ್ಟ್‌ ನಲ್ಲಿ ಈ ವರ್ಷ ರಿಲೀಸ್‌ ಗೆ ರೆಡಿಯಾಗಿರೋ ಮೊದಲ ಎರಡು ಸಿನಿಮಾಗಳಂದ್ರೆ, ಅದು ದಿ ವಿಲನ್‌ ಮತ್ತು 'ಅಂಬಿ ನಿಂಗ್‌ ವಯಸ್ಸಾಯ್ತೋ'. ಈ ಎರಡೂ ಚಿತ್ರಗಳಲ್ಲಿ ದಿ ವಿಲನ್‌ ಆಲ್ಮೋಸ್ಟ್‌ ಒಂದೂವರೆ ವರ್ಷದಿಂದ ತಯಾರಾಗ್ತಾನೆ ಇದೆ. ನಿರ್ದೇಶಕ ಪ್ರೇಮ್‌ ಇನ್ನೂ ಟೀಸರ್‌ ನೇ ರಿಲೀಸ್‌ ಮಾಡಿಲ್ಲ. ಆದ್ರೆ, ವಿಲನ್‌ ಶುರು ಮಾಡಿ ಶೂಟಿಂಗ್‌ ಮೂಕ್ಕಾಲು ಭಾಗ ಮುಗಿದ ಮೇಲೆ, ಶುರುಮಾಡಿದ 'ಅಂಬಿ ನಿಂಗ್‌ ವಯಸ್ಸಾಯ್ತೋ' ಸಿನಿಮಾ ಆಲ್ಮೋಸ್ಟ್‌ ಕಂಪ್ಲೀಟ್‌ ಆಗಿದೆ. ವಿಲನ್‌ ಸಿನಿಮಾ ಇನ್ನೂ ಟೈಂ ತೆಗೆದುಕೊಳ್ತಿದ್ದು, ವಿಲನ್‌ ಗಿಂತ ಮೊದಲು 'ಅಂಬಿ ನಿಂಗ್‌ ವಯಸ್ಸಾಯ್ತೋ' ರಿಲೀಸ್‌ ಆಗೋದು ಬಹುತೇಕ ಖಚಿತವಾಗಿದೆ.      

short by Pawan / more at Balkani News

Comments