Skip to main content


ಗೋಲ್​ಮಾಲ್​ ದಾರಿಯಲ್ಲೇ ರ‍್ಯಾಂಬೊ

ಪ್ರೇಕ್ಷಕರು ‘ರ‍್ಯಾಂಬೊ’ ಸರಣಿಗೆ ಫಿದಾ ಆಗಿದ್ದಾರೆ. 2012ರಲ್ಲಿ ತೆರೆಕಂಡ ‘ರ‍್ಯಾಂಬೊ’ ರೀತಿಯೇ ಇತ್ತೀಚೆಗೆ ಬಂದ ‘ರ‍್ಯಾಂಬೊ 2’ ಚಿತ್ರಕ್ಕೂ ಸಿನಿಪ್ರಿಯರಿಂದ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಹಾಡುಗಳು ಕೂಡ ಧೂಳೆಬ್ಬಿಸಿವೆ. ಈ ಗೆಲುವನ್ನು ಮುಂದುವರಿಸಿಕೊಂಡು ಹೋಗಲು ಚಿತ್ರತಂಡ ಸಜ್ಜಾಗಿದೆ. ಹಾಗಂತ ಮೂರನೇ ಸರಣಿ ಮಾಡಿ ಶುಭಂ ಹೇಳುವ ಲೆಕ್ಕಾಚಾರ ಅವರದ್ದಲ್ಲ. ಎಷ್ಟು ಸಾಧ್ಯವೋ ಅಷ್ಟು ಸರಣಿಗಳನ್ನು ಮುಂದುವರಿಸಲು ಯೋಜನೆ ಸಿದ್ಧವಾಗುತ್ತಿದೆ. ಅದಕ್ಕೆ ಬಾಲಿವುಡ್​ನ ‘ಗೋಲ್​ಮಾಲ್’ ಸಿನಿಮಾವನ್ನು ಉದಾಹರಣೆಯಾಗಿ ನೀಡುತ್ತಾರೆ ‘ರ‍್ಯಾಂಬೊ 2’ ತಂಡದ ಕ್ರಿಯೇಟಿವ್ ಹೆಡ್ ತರುಣ್ ಸುಧೀರ್.

2006ರಲ್ಲಿ ನಿರ್ದೇಶಕ ರೋಹಿತ್ ಶೆಟ್ಟಿ ಆರಂಭಿಸಿದ ‘ಗೋಲ್​ಮಾಲ್’ ಸೀರಿಸ್ ಈವರೆಗೂ 4 ಚಿತ್ರಗಳನ್ನು ಹೊರತಂದಿದೆ. ಆ ಪೈಕಿ ಎಲ್ಲವೂ ಸೂಪರ್​ಹಿಟ್. ‘ಹಿಂದಿಯಲ್ಲಿ ಕಾಮಿಡಿ ಮಾತ್ರವಲ್ಲದೆ, ಬೇರೆ ಬೇರೆ ಪ್ರಕಾರದ ಫ್ರಾಂಚೈಸಿಗಳು ಯಶಸ್ವಿಯಾಗಿವೆ. ಆದರೆ ನಮ್ಮ ಚಂದನವನದಲ್ಲಿ ಅದು ಸಾಧ್ಯವಾಗಿಲ್ಲ. ಈ ಹಿಂದೆ ‘ಗಣೇಶನ ಮದುವೆ’ ರೀತಿಯ ಚಿತ್ರಗಳು ಅಂಥ ಒಂದು ಟ್ರೆಂಡ್ ಸೆಟ್ ಮಾಡಿದ್ದವು. ಈಗ ‘ರ್ಯಾಂಬೊ’ ಫ್ರಾಂಚೈಸಿ ಮೂಲಕ ಮತ್ತೆ ಪ್ರಯತ್ನ ಮಾಡುತ್ತಿದ್ದೇವೆ’ ಎನ್ನುವ ತರುಣ್ ಸುಧೀರ್, ಪ್ರತಿ ವರ್ಷಕ್ಕೊಂದು ಅವತರಣಿಕೆ ಹೊರತರಬೇಕು ಎಂಬ ಗುರಿ ಇರಿಸಿಕೊಂಡಿದ್ದಾರೆ.    

short by Pawan / more at Vijayavani

Comments