Skip to main content


ಡಾಲಿ ಅಜ್ಜಿಯ ಕನಸು ಟಗರು ಮೂಲಕ ನೆರವೇರಿದೆಯಂತೆ !

ಟಗರು ಸಿನಿಮಾ ಸೂಪರ್​ ಸಕ್ಸಸ್​ ನ ಜೊತೆಗೆ ಸ್ಪೆಷಲ್​ ಸ್ಟಾರ್​ ಆಗಿ ಸ್ಯಾಂಡಲ್​ ವುಡ್ ​ಗೆ​ ಆಗಿ ಎಂಟ್ರಿ ಕೊಟ್ಟ ಧನಂಜಯ್​ ಇಮೇಜ್,​ ಈಗ ಡಾಲಿ ಧನಂಜಯ್​​ ಆಗಿ ಬದಲಾಗಿದೆ. ಇದಕ್ಕೆ ಕಾರಣವಾಗಿದ್ದು ಶಿವಣ್ಣ ಅಭಿನಯದ ಟಗರು ಸಿನಿಮಾ. ಟಗರು ಸಿನಿಮಾದಲ್ಲಿ ಧನಂಜಯ್​ ನಟಿಸೋಕೆ ಎಷ್ಟೋ ವರ್ಷಗಳ ಹಿಂದೆ ಡಾಲಿ ಅಜ್ಜಿ ಅಣ್ಣಾವ್ರ ಬಳಿ ಕೇಳಿಕೊಂಡ ವರವೇ ಕಾರಣ.

ಧನಂಜಯ್​ ಅಜ್ಜಿ ವರನಟ ಡಾ.ರಾಜ್​ಕುಮಾರ್​ ಸಮಾಧಿ ಬಳಿ ನಿಂತು ಅವತ್ತು ಕೇಳಿದ್ದ ವರ, ಇವತ್ತು ಡಾಲಿ ಧನಂಜಯ್ ​ರನ್ನ ಟಗರು ಸಿನಿಮಾ ಮಾಡೋ ಹಾಗೆ ಮಾಡಿದೆ. ಅಣ್ಣವ್ರ ಮಗ ಶಿವಣ್ಣನ ಜೊತೆಗೆ ನಟಿಸೋ ಹಾಗೆ ಮಾಡಿದೆ. ಈ ಘಟನೆ ನೆನೆದಾಗಲೆಲ್ಲಾ ಭಾವುಕರಾಗ್ತಾರೆ ಧನಂಜಯ್​​. ಟಗರು ಸಿನಿಮಾ ಆಫರ್​ ಸಿಕ್ಕಿದಾಗಿನಿಂದ ಈ ಘಟನೆ ಧನಂಜಯ್​ ರನ್ನ ತುಂಬಾ ಕಾಡ್ತಾ ಇದ್ಯಂತೆ.    

short by Pawan / more at Balkani News

Comments