Skip to main content


ಅಮೆರಿಕ ಮಾಧ್ಯಮಗಳ ವಿರುದ್ಧ ಟ್ರಂಪ್‌ ಕಿಡಿ

‘ಉತ್ತರ ಕೊರಿಯಾ ಅಧ್ಯಕ್ಷ ಕಿಮ್‌ ಜಾಂಗ್‌ ಉನ್ ಜತೆಗಿನ ಐತಿಹಾಸಿಕ ಶೃಂಗಸಭೆಯನ್ನು ಅಮೆರಿಕ ಮಾಧ್ಯಮಗಳು ಮುಕ್ತ ಮನಸ್ಸಿನಿಂದ ವರದಿ ಮಾಡಿಲ್ಲ’ ಎಂದು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಕಿಡಿಕಾರಿದ್ದಾರೆ.

‘ಸುಳ್ಳು ಸುದ್ದಿಯೇ ದೇಶದ ಜನತೆಯ ದೊಡ್ಡ ಶತ್ರು. ಮೂರ್ಖರಿಂದ ಸುಳ್ಳು ಸುದ್ದಿಗಳನ್ನು ಸುಲಭವಾಗಿ ಹಬ್ಬಿಸಲಾಗುತ್ತಿದೆ. ವಿಶೇಷವಾಗಿ ಎನ್‌ಬಿಸಿ ಮತ್ತು ಸಿಎನ್‌ಎನ್‌ ಉತ್ತರ ಕೊರಿಯಾ ಜತೆಗಿನ ಮಹತ್ವದ ಒಪ್ಪಂದವನ್ನು ಕಡೆಗಣಿಸುವ ಪ್ರಯತ್ನ ನಡೆಸಿವೆ’ ಎಂದು ಟ್ರಂಪ್‌ ಟ್ವೀಟ್‌ ಮಾಡಿದ್ದಾರೆ.

‘ಕಿಮ್‌ ಜತೆ ಮೊದಲ ಸುತ್ತಿನ ಮಾತುಕತೆ ನಡೆಸಿದ ಬಳಿಕ ಇನ್ನು ಮುಂದೆ ಉತ್ತರ ಕೊರಿಯಾದಿಂದ ಅಣ್ವಸ್ತ್ರಗಳ ಬೆದರಿಕೆ ಇರುವುದಿಲ್ಲ ಎನ್ನುವ ಅಭಿಪ್ರಾಯ ಮೂಡಿತು’ ಎಂದು ತಿಳಿಸಿದ್ದಾರೆ.    

short by Pawan / more at Prajavani

Comments