Skip to main content


ನಾಗರಹಾವು ಹೊಸ ಅವತಾರದಲ್ಲಿ ಮತ್ತೊಮ್ಮೆ ಕನ್ನಡಿಗರ ಮುಂದೆ

70ರ ದಶಕದ ಯಶಸ್ವಿ ಚಿತ್ರ ನಾಗರಹಾವಿನಲ್ಲಿ ರಾಮಚಾರಿಯಾಗಿ ವಿಷ್ಣುವರ್ಧನ್ ಪಾತ್ರ ಅಥವಾ ಅಂಬರೀಷ್ ಅವರ ಏ ಬುಲ್ ಬುಲ್ ಮಾತಾಡಕ್ಕಿಲ್ವಾ ಸಂಭಾಷಣೆಯನ್ನು ಮತ್ತೊಮ್ಮೆ ಬೆಳ್ಳಿಪರದೆ ಮೇಲೆ ನೋಡಲು ಸಿಕ್ಕರೆ ಹೇಗೆ? ಹೌದು ಸಿನಿ ಪ್ರಿಯರಿಗೆ ಇಂತಹದ್ದೊಂದು ಅವಕಾಶ ಮತ್ತೊಮ್ಮೆ ಒದಗಿಬಂದಿದೆ. ನಾಗರಹಾವು ಚಿತ್ರ ಹೊಸ ಅವತಾರದಲ್ಲಿ ಮತ್ತೆ ಮೂಡಿಬರಲಿದೆ. ಅದನ್ನು ಸಾಧ್ಯವಾಗಿಸುತ್ತಿರುವುದು ಈಶ್ವರಿ ಪ್ರೊಡಕ್ಷನ್ ಸಂಸ್ಥೆ. ಎನ್ ವೀರಸ್ವಾಮಿಯವರು ಹುಟ್ಟುಹಾಕಿದ್ದ ಈ ನಿರ್ಮಾಣ ಸಂಸ್ಥೆಯನ್ನು ಇಂದು ಅವರ ಮಕ್ಕಳಾದ ವಿ ರವಿಚಂದ್ರನ್ ಮತ್ತು ಬಾಲಾಜಿ ನಡೆಸಿಕೊಂಡು ಹೋಗುತ್ತಿದ್ದಾರೆ. ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರು ಅಂದು 35ಎಂಎಂನಲ್ಲಿ ಬಿಡುಗಡೆಗೊಳಿಸಿದ್ದ ಚಿತ್ರವನ್ನು ಇಂದು ಸಿನಿಮಾಸ್ಕೋಪ್ ಸಿದ್ಧಪಡಿಸುತ್ತಿದೆ. ಅದನ್ನು ದೊಡ್ಡ ಮಟ್ಟದಲ್ಲಿ ಅತ್ಯಾಧುನಿಕ ತಂತ್ರಜ್ಞಾನದಲ್ಲಿ ಬೃಹತ್ ಪರದೆ ಮೇಲೆ ಮೂಡಿಸಲು ಮುಂದಾಗಿದೆ.   

short by Pawan / more at Kannada Prabha

Comments