Skip to main content


ನಾಲ್ಕಾಣೆ ಕೊಟ್ಟು ಆಗ ಸಿನಿಮಾ ನೋಡ್ತಿದ್ದ ಮಜವೇ ಬೇರೆ ಬಿಡಿ.!

ಒಂದು ಸಿನಿಮಾ ನೋಡಬೇಕು ಅಂದ್ರೆ, ಕನಿಷ್ಟ ಅಂದರೂ ಜೇಬಲ್ಲಿ 100 ರೂಪಾಯಿ ಬೇಕು. ಮನೆಮಂದಿಯೆಲ್ಲ ಸಿನಿಮಾ ನೋಡ್ತೀವಿ ಅಂತಾದರೆ, ಮಿನಿಮಂ ಸಾವಿರ ರೂಪಾಯಿ ಬೇಕು. ಅದರಲ್ಲೂ ಮಾಲ್ ಕಡೆ ಮುಖ ಮಾಡಿದರೆ, ಜೇಬು ತೂತಾಗುವುದು ಖಂಡಿತ. ಆದರೆ, ಕೆಲವೇ ಕೆಲವು ವರ್ಷಗಳ ಹಿಂದೆ ಹೀಗೆ ಇರಲಿಲ್ಲ. ವರ್ಷಗಳ ಹಿಂದೆ ಸಿನಿಮಾ ನೋಡುವ ಮಜಾ ಹೇಗಿರ್ತಿತ್ತು ಅಂತ ರುಕ್ಮಿಣಿ ಜಯರಾಮ ರಾವ್ ಎಂಬುವರು ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದಾರೆ.

ಸ್ನೇಹಿತರೇ, ಇವತ್ತು ಯಾರೋ ಸಿನೆಮಾ ಮಂದಿರದ ಹಳೇ ಟಿಕೆಟ್ ಗಳನ್ನು ವಾಲ್ ಗೆ ಹಾಕಿದ್ದರು. ಅದರ ರೇಟ್ ಗಳನ್ನು ನೋಡಿದರೆ ನೀವು ಆಶ್ಚರ್ಯ ಪಡ್ತೀರಿ.! ತುಂಬಾ ತುಂಬಾ ಹಳೆಯ ಕಾಲದ್ದೇನಲ್ಲಾ 1970 ರಲ್ಲಿ ಕಪಾಲಿಯಲ್ಲಿ ಬಾಲ್ಕನಿ 2 ರೂ, ಸೆಕೆಂಡ್ ಕ್ಲಾಸ್ 1 20, ಗಾಂಧಿ ಕ್ಲಾಸ್ 1 ರೂ.! ಅಬ್ಬಾ ನಿಜಾನಾ.!? ಅಂದರೆ ನಿಜ.! ಈಗ ಎಲ್ಲಾ ಥಿಯೇಟರ್‌ ಗಳಲ್ಲೂ 150, 100, 80 ಇದ್ದರೆ... ಮಾಲ್ ಗಳಲ್ಲಿ - 500, 350, 250 ಇದೆ.! ಅದು ಹೇಗೆ ಸಿನಿಮಾಗಳನ್ನು ಇಷ್ಡೊಂದು ದುಡ್ಡು ಕೊಟ್ಟು ಜನ ನೋಡ್ತಾರೆ.!? 

ಮಾಲ್ ಹೊರಗಡೆ ವಿರಾಮದಲ್ಲಿ ಕುಡಿಯುವ ಕಾಫಿಯ ತಿಂಡಿಯ ಬೆಲೆಯಂತೂ ಮಾಲ್ ಗಿಂತಾ ಮೇಲೇ ಗಗನದಲ್ಲಿದೆ! ಆದರೂ ಜನ ಸಿನಿಮಾ ನೋಡ್ತಾರೆ! ಹಾಗಾದರೆ ನಮ್ಮ ಜನರಲ್ಲಿ ಹಣ ಹೆಚ್ಚಾಗಿದೆ ಅನ್ನಿಸೋಲ್ವೇ.? ಹೌದು ಬಡತನದ ರೇಖೆಗಿಂತ ಕೆಳಗಿರುವವರ ಜನಸಂಖ್ಯೆ ಬಹಳ ಕಡಿಮೆ.! ಇದನ್ನೆಲ್ಲಾ ನೋಡುವಾಗ ನನಗೆ ನಾವು ಸಿನಿಮಾ ನೋಡುತ್ತಿದ್ದ ದಿನಗಳ ನೆನಪು ಮನಃಪಟಲದ ಮುಂದೆ ಮೂಡುತ್ತಿದೆ.!!    

short by Pawan / more at Filmibeat

Comments