Skip to main content


ಗುಡ್ ನ್ಯೂಸ್ ! ದೇಶಾದ್ಯಂತ ಏಕಕಾಲಕ್ಕೆ ಚುನಾವಣೆ.! ಪ್ರಧಾನಿ ಮೋದಿಯಿಂದ ಕರೆ.!

ಚುನಾವಣೆ ಎಂದ ತಕ್ಷಣ ಪ್ರತಿಯೊಬ್ಬರ ಕಿವಿ ನೆಟ್ಟಗಾಗುತ್ತದೆ. ಯಾಕೆಂದರೆ ನರೇಂದ್ರ ಮೋದಿಯವರು ಪ್ರಧಾನಮಂತ್ರಿ ಅಭ್ಯರ್ಥಿಯಾಗಿ ಆಯ್ಕೆಯಾದ ದಿನದಿಂದಲೇ ದೇಶದ ಪ್ರತಿಯೊಬ್ಬರಲ್ಲೂ ಚುನಾವಣೆಯ ಹುಚ್ಚು ಹಿಡಿದಿತ್ತು. ಲೋಕಸಭಾ ಚುನಾವಣೆ, ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಕಾಲಿಗೆ ಗೆಜ್ಜೆ ಕಟ್ಟಿ ತಿರುಗುವ ಕಾರ್ಯಕರ್ತರಿಗೂ ಪಕ್ಷದ ಮುಖಂಡರಿಗೂ ಮತ್ತು ಮತದಾರರಿಗೂ ಉಪಯೋಗವಾಗುವಂತೆ ದೇಶಾದ್ಯಂತ ಏಕಕಾಲದಲ್ಲಿ ಚುನಾವಣೆ ನಡೆಸಲು ಪ್ರಧಾನಿ ಮೋದಿ ನಿರ್ಧರಿಸಿದ್ದಾರೆ. ಈಗಾಗಲೇ ನರೇಂದ್ರ ಮೋದಿಯವರ ಪ್ರಕಾರ , ಪಂಚಾಯತ್ ಚುನಾವಣೆಯಿಂದ ಹಿಡಿದು ಲೋಕಸಭಾ ಚುನಾವಣೆಯವರೆಗೂ ಒಂದೇ ಬಾರಿಗೆ ಚುನಾವಣೆ ನಡೆಸಿದರೆ ಉತ್ತಮ ಎಂದು ಹೇಳಿಕೊಂಡಿದ್ದರು. ಆದರೆ ಈವರೆಗೆ ಚುನಾವಣೆಯ ಬಗ್ಗೆ ಮೋದಿ ಗಾಢವಾಗಿ ಚರ್ಚಿಸಿರಲಿಲ್ಲ. ಆದರೆ ಇದೀಗ ಮತ್ತೆ ಈ ವಿಚಾರಕ್ಕೆ ಜೀವಕಳೆ ತುಂಬಿದ ಪ್ರಧಾನಿ, ಪ್ರತೀ ರಾಜ್ಯಗಳಲ್ಲೂ ಈ ಬಗ್ಗೆ ಚರ್ಚಿಸಬೇಕೆಂದು ಆಯಾ ರಾಜ್ಯದ ಮುಖ್ಯಮಂತ್ರಿಗಳಿಗೆ ಕರೆ ಕೊಟ್ಟಿದ್ದಾರೆ.!   

short by Pawan / more at PostcardKannada

Comments