Skip to main content


ರಾಜರಥ ನಿರ್ದೇಶಕ ಅನೂಪ್ ಭಂಡಾರಿ ಮೇಲೆ ಅಟ್ಯಾಕ್!

ರ‍್ಯಾಪಿಡ್ ರಶ್ಮಿ ಪ್ರೋಗ್ರಾಮಿನಲ್ಲಿ, ‘ರಾಜರಥ ನೋಡದವರು____? ಅನ್ನೋ ಪ್ರಶ್ನೆಗೆ ‘ಕಚಡಾ ನನ್ಮಕ್ಳು ಅಂತಾ ಚಿತ್ರದ ನಿರ್ದೇಶಕ ಅನೂಪ್ ಭಂಡಾರಿ ಉತ್ತರ ಕೊಟ್ಟಿದ್ದು, ಆಮೇಲೆ ಕೆಲವು ಮಾಧ್ಯಮಗಳು ಅದನ್ನು ಹೆಂಗೆ ಬೇಕೋ ಹಂಗೆಲ್ಲಾ ತಿರುಚಿ, ಮಡಚಿದ್ದು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯವರು ಅದೇ ಹಬೆಯಲ್ಲಿ ಬೇಳೆ ಬೇಯಿಸಿಕೊಳ್ಳಲು ಯತ್ನಿಸಿದ್ದು, ಸಾರಾ ಗೋವಿಂದು ಬಾಯಲ್ಲಿ ರ‍್ಯಾಪಿಡ್ ರಶ್ಮಿ ಬ್ಯಾನ್ ಆಗಿದ್ದೆಲ್ಲಾ ಈಗ ಮುಗಿದು ಹೋದ ಅಧ್ಯಾಯ. ಆದರೆ ಅದೇ ‘ಕಚಡಾ ಚಾಪ್ಟರ್ರು ಮತ್ತೊಮ್ಮೆ ಓಪನ್ ಆಗಿದೆ.

ಅನೂಪ್ ಭಂಡಾರಿ ಮೇಲೆ ಯುವಕರ ಗುಂಪೊಂದು ಅಟ್ಯಾಕ್ ಮಾಡಿದ ಘಟನೆ ನಡೆದಿದೆ! ಹೌದು, ಮೊನ್ನೆ ದಿನ ಅನೂಪ್ ಭಂಡಾರಿ ಮೈಸೂರಿನ ಮೇಟಗಳ್ಳಿ ರಸ್ತಯಲ್ಲಿ ತಮ್ಮ ಕಾರನ್ನು ನಿಲ್ಲಿಸಿಕೊಂಡು ವಿಶ್ರಾಂತಿ ಪಡೆಯುತ್ತಿದ್ದರಂತೆ. ಆ ಸಂದರ್ಭದಲ್ಲಿ ಮೂರ‍್ನಾಲ್ಕು ಬೈಕುಗಳಲ್ಲಿ ಅದೇ ದಾರಿಯಲ್ಲಿ ಸಂಚರಿಸುತ್ತಿದ್ದ ಹುಡುಗರ ಗುಂಪೊಂದು ಅನೂಪ್ ಭಂಡಾರಿಯನ್ನು ನೋಡಿದೆ. ಕೆಲವೇ ಕ್ಷಣಗಳಲ್ಲಿ ಯೂಟರ್ನ್ ಮಾಡಿಕೊಂಡು ಬಂದವರು ಏಕಾಏಕಿ ‘ಏನೋ ಯಾರೋ ಕಚಡಾ ನನ್ಮಕ್ಳು… ಅಂತಾ ಥೇಟು ಸಿನಿಮಾ ಶೈಲಿಯಲ್ಲಿ ಅನೂಪ್‌ರನ್ನು ಅಟ್ಯಾಕ್ ಮಾಡಿದ್ದಾರೆ. ಒಬ್ಬರೋ ಇಬ್ಬರೋ ಆದರೆ ಪರವಾಗಿಲ್ಲ ಹತ್ತಾರು ಜನರ ಗ್ಯಾಂಗು ಹೀಗೆ ಮುರಕೊಂಡು ಬಿದ್ದರೆ ಅನೂಪ್‌ಗಾದರೂ ನಡುಕ ಶುರುವಾಗದಿರಲು ಹೇಗೆ ಸಾಧ್ಯ? ಪಬ್ಲಿಕ್ಕಲ್ಲಿ ನ್ಯೂಸೆನ್ಸ್ ಕ್ರಿಯೇಟ್ ಮಾಡಿ, ಒಬ್ಬಂಟಿಗರನ್ನು ಹೊಡೆಯೋ ಕ್ರೂರ ಸಂಪ್ರದಾಯ ಬೇರೆ ಹೆಚ್ಚುತ್ತಿದೆಯಲ್ಲ… ಹೀಗಾಗಿ ಪರಿಸ್ಥಿತಿಯನ್ನು ಗಮನಿಸಿದ ಅನೂಪ್ ಕೂಡಲೇ ತಮ್ಮ ಸಹಾಯಕ ನಿರ್ದೇಶಕನಿಗೆ ಫೋನು ಮಾಡಿ ಸ್ಥಳಕ್ಕೆ ಕರೆಸಿಕೊಂಡಿದ್ದಾರೆ. ಅಲ್ಲೀತನಕ ಮಾತಿನಲ್ಲೇ ಮೇಂಟೇನು ಮಾಡಿಕೊಂಡಿದ್ದ ಅನೂಪ್ ತಮ್ಮ ಕಡೆಯ ಹುಡುಗ ತಂದ ಬೈಕಿನಲ್ಲಿ ಏರಿ, ಕಾರನ್ನೂ ರಸ್ತೆಯಲ್ಲೇ ಬಿಟ್ಟು ಬಚಾವಾಗಿದ್ದಾರೆ.      

short by Pawan / more at Cinibuzz

Comments