Skip to main content


ಜ್ಯೋತಿಷಿ ಮಾತು ನಂಬಿ ನಾಳೆ ನಡೆಯಲಿರುವ ಪ್ರಮಾಣ ವಚನ ಸ್ವೀಕಾರದ ಸಮಯ ಬದಲು?

ನಾಳೆ (ಬುಧವಾರ) ಸಮ್ಮಿಶ್ರ ಸರ್ಕಾರದ ಸಚಿವರುಗಳು ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ಈ ನಡುವೆ ನಾಳೆ ನಡೆಯಲಿರುವ ನೂತನ ಸಚಿವ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದ ಸಮಯವನ್ನು 2ಗಂಟೆಗೆ ನಿಗದಿ ಮಾಡಲಾಗಿತ್ತು. ಆದರೆ ನಾಳೆ ಪ್ರಮಾಣ ವಚನ ಸ್ವೀಕಾರ ಮಾಡಲಿರುವ ಹೆಚ್.ಡಿ ರೇವಣ್ಣ ನವರು ಜ್ಯೋತಿಷಿಗಳ ಮಾತನ್ನು ನಂಬಿ ಮಧ್ಯಾಹ್ನ 2 ಗಂಟೆ ಬದಲಿಗೆ ಮಧ್ಯಾಹ್ನ 2.11ಕ್ಕೆ ಪ್ರಮಾಣ ವಚನ ಸ್ವೀಕಾರ ಮಾಡುವುದಕ್ಕೆ ಸಮಯವನ್ನು ನಿಗದಿ ಮಾಡುವಂತೆ ಸರ್ಕಾರದ ಹಿರಿಯ ಅಧಿಕಾರಗಳ ಮೇಲೆ ಒತ್ತಡ ಹಾಕಿದ್ದಾರೆ ಎನ್ನಲಾಗಿದೆ. ಈ ನಡುವೆ ನಾಳೆ ನಡೆಯಲಿರುವ ಸಮ್ಮಿಶ್ರ ಸರ್ಕಾರದ ಸಚಿವರ ಕಾರ್ಯಕ್ರಮವನ್ನು ನಾಳೆ ಯಾವುದೇ ಕಾರಣಕ್ಕೂ ಮುಂದೂಡುವುದಿಲ್ಲ ಅಂತ ರಾಜ್ಯ ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭಾ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

short by Shraman / more at Kannada News Now

Comments