Skip to main content


ಆರ್.ಜಿ.ವಿ. ನಿರ್ಮಾಣದ ದ್ವಿಭಾಷಾ ಚಿತ್ರದಲ್ಲಿ ಧನಂಜಯ್

 ''ಟಗರು'' ಚಿತ್ರದಲ್ಲಿನ ಡಾಲಿ ಪಾತ್ರದಲ್ಲಿ ಧನಂಜಯ್ ಅಭಿನಯ ಪ್ರೇಕ್ಷಕರು ಹಾಗೂ ಚಿತ್ರೋದ್ಯಮಿಗಳ ಭಾರೀ ಪ್ರಶಂಸೆಗೆ ಪಾತ್ರವಾಗಿದೆ. ಇದೀಗ ಖ್ಯಾತ ನಿರ್ಮಾಪಕ ರಾಮ್ ಗೋಪಾಲ್ ವರ್ಮಾ ತಮ್ಮ ಬ್ಯಾನರ್ನಡಿಯ ಮುಂದಿನ ಚಿತ್ರದಲ್ಲಿಲ್ಲಿ ಧನಂಜಯ್ ಗೆ ಮುಖ್ಯ ಪಾತ್ರವೊಂದನ್ನು ನೀಡುವ ಭರವಸೆ ಕೊಟ್ಟಿದ್ದಾರೆ. ಬಲ್ಲ ಮೂಲಗಳ ಪ್ರಕಾರ ವರ್ಮಾ ತಮ್ಮ ಬ್ಯಾನರ್ ಹಾಗೂ ರಾಶಿ ಕಂಬೈನ್ಸ್ ನ ಸಹಯೋಗದಲ್ಲಿ ಚಿತ್ರವೊಂದನ್ನು ತಯಾರಿಸುತ್ತಿದ್ದು ಇದು ಕನ್ನಡ ಹಾಗೂ ತೆಲುಗು ಎರಡೂ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಆರ್.ಜಿ.ವಿ. ಸಹವರ್ತಿಯಾಗಿ ದೀರ್ಘಕಾಲ ಕೆಲಸ ಮಾಡಿದ್ದ ಯುವ ನಿರ್ದೇಶಕ ಸಿದ್ದಾಂರ್ಥ್ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ.

ಇದು ಸಿದ್ದಾರ್ಥ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಪ್ರಥಮ ಚಲನಚಿತ್ರವಾಗಿದೆ. ಇದು ದ್ವಿಭಾಷಾ ಚಿತ್ರವಾಗಿ ಮೂಡಿಬರುತ್ತಿರುವುದು ಇನ್ನೊಂದು ವಿಶೇಷ. ಜೂನ್ 15ರಿಂದ ಚಿತ್ರದ ಚಿತ್ರೀಕರಣ ಪ್ರಾರಂಭವಾಗಲಿದೆ ಎಂದು ಮೂಲಗಳು ಹೇಳಿದೆ. ಚಿತ್ರತಂಡ ಈ ಹೊಸ ಯೋಜನೆಗೆ ಇನ್ನೂ ಹೆಸರು ಅಂತಿಮಗೊಳಿಸಿಲ್ಲ, ’ಭೈರವ ಗೀತಾ’ ಎನ್ನುವ ಹೆಸರು ಸೂಚಿಸಿದೆಯಾದರೂ ಇದಿನ್ನೂ ಅಂತಿಮವಾಗಿಲ್ಲ. ಆದರೆ ಹಳ್ಳಿಯಲ್ಲಿ ನಡೆವ ಕಥೆ ಹೊಂದಿರುವ ಈ ಚಿತ್ರ ಎರಡೂ ರಾಜ್ಯಗಳ ಸನ್ನಿವೇಶಕ್ಕೆ ತಕ್ಕಂತೆ ಇರಲಿದೆ. ಚಿತ್ರೀಕರಣ ಜುಲೈ 30ರೊಳಗೆ ಪೂರ್ಣಗೊಳ್ಳಲಿದೆ ಎಂದು ಚಿತ್ರತಂಡದ ಮಾಹಿತಿ ತಿಳಿಸಿದೆ.   

short by Pawan / more at Kannada Prabha

Comments